ಚೆನ್ನೈನಿಂದ ಅಪಹರಿಸಲ್ಪಟ್ಟ ನೌಕಾಪಡೆಯ ನಾವಿಕನನ್ನು ಮಹಾರಾಷ್ಟ್ರದ ಪಾಲಘರ್‌ನಲ್ಲಿ ಜೀವಂತವಾಗಿ ಸುಟ್ಡು ಕೊಲೆ

ಹಂತಕರು ಪರಾರಿ

ಸರ್ಕಾರ ಅಪರಾಧಿಗಳನ್ನು ಪತ್ತೆ ಹಚ್ಚಿ ಕೂಡಲೇ ಗಲ್ಲಿಗೇರಿಸಬೇಕೆಂದು ಜನರ ಆಗ್ರವಾಗಿದೆ!

ಸೂರಜ್ ಕುಮಾರ್ ಮಿಥಿಲೇಶ್ ದುಬೆ

ಠಾಣೆ, ಫೆ .೭ (ಸುದ್ಧಿ): ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೂರಜ್ ಕುಮಾರ್ ಮಿಥಿಲೇಶ್ ದುಬೆ (೨೭) ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಜನವರಿ ೩೧ ರಂದು ೧೦ ಲಕ್ಷ ರೂ.ಗಳ ಸುಲಿಗೆಗಾಗಿ ಅಪಹರಿಸಿದ್ದಾರೆ. ಅವರನ್ನು ಮೂರು ದಿನಗಳ ಕಾಲ ಚೆನ್ನೈಯ ಅಜ್ಞಾತ ಸ್ಥಳದಲ್ಲಿ ಬಂಧಿಸಿಡಲಾಗಿತ್ತು. ಸುಲಿಗೆ ಹಣ ನೀಡಲು ಅವರು ನಿರಾಕರಿಸಿದ ನಂತರ, ಅವರನ್ನು ಫೆಬ್ರವರಿ ೫ ರಂದು ಮಹಾರಾಷ್ಟ್ರ-ಗುಜರಾತ್ ಗಡಿಯ ಬಳಿಯ ತಲಾಸರಿ ತಾಲ್ಲೂಕಿನ ವೆವಜಿ ಗ್ರಾಮದ ಪಶ್ಚಿಮ ಘಟ್ಟದಲ್ಲಿರುವ ಅರಣ್ಯಕ್ಕೆ ಚತುಶ್ಚಕ್ರ ವಾಹನದಲ್ಲಿ ಕರೆತರಲಾಯಿತು. ಬೆಳಿಗ್ಗೆ ೯ ಗಂಟೆ ಸುಮಾರಿಗೆ ಮೂವರು ವ್ಯಕ್ತಿಗಳು ಅವರ ದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.

ಈ ಘಟನೆಯ ಬಗ್ಗೆ ಸ್ಥಳೀಯ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಘೋಲ್ವಾಡ್ ಪೊಲೀಸರು ದುಬೆ ಅವರನ್ನು ಅಗರ್ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರು ಅಲ್ಲಿಯೇ ನಿಧನರಾದರು. ಘೋಲ್ವಾಡ್ ಪೊಲೀಸ್ ಠಾಣೆಯಲ್ಲಿ ೩ ಅಜ್ಞಾತ ಅಪಹರಣಕಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

(ಸೌಜನ್ಯ :IndiaTV)