‘ಹೊರಗಿನವರು ಕಾಶ್ಮೀರದಲ್ಲಿ ನೆಲೆಸಿದರೆ, ಅತ್ಯಾಚಾರ ಹೆಚ್ಚಾಗುತ್ತದೆ !’(ಅಂತೆ) – ಪಿಡಿಪಿಯ ನಾಯಕ ಸುರಿಂದರ್ ಚೌಧರಿ

  • ೧೯೮೯ ರಲ್ಲಿ ಮಸೀದಿಗಳಿಂದ ಹಿಂದೂಗಳಿಗೆ ಬೆದರಿಕೆ ಹಾಕಿದ ನಂತರ ಏನು ನಡೆಯಿತು ಎಂಬುದು ಚೌಧರಿ ಮರೆತಿದ್ದಾರೆಯೇ ? ಆಗ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಯಾರು ಮಾಡಿದ್ದರು, ಎಂಬುದು ಅವರು ಏಕೆ ಹೇಳುತ್ತಿಲ್ಲ ? ಅಥವಾ ‘ಅವರು ವೈಚಾರಿಕ ಸುನ್ನತ್ ಮಾಡಿಸಿಕೊಂಡಿದ್ದಾರೆ’, ಎಂದು ಹಿಂದೂಗಳು ಅರ್ಥಮಾಡಿಕೊಳ್ಳಬೇಕೆ ?
  • ಉಳಿದ ಭಾರತೀಯರ ತೆರಿಗೆಯಿಂದ ಇಲ್ಲಿಯವರೆಗೆ ಕಾಶ್ಮೀರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡಲಾಗಿದೆ, ಆಗ ಆ ಹಣವನ್ನು ತೆಗೆದುಕೊಳ್ಳುವಾಗ ಚೌಧರಿಯವರಿಗೆ ಈ ರೀತಿಯ ವಿಚಾರ ಬರಲಿಲ್ಲವೇ ?
ಸುರಿಂದರ್ ಚೌಧರಿ

ಜಮ್ಮು : ಕಾಶ್ಮೀರಿ ಅಲ್ಲದವರು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದರೆ, ಇಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತವೆ, ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ಸುರಿಂದರ್ ಚೌಧರಿ ಒಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕಲಂ ೩೭೦ ತೆಗೆದ ನಂತರ ಕಾಶ್ಮೀರಿ ಅಲ್ಲದವರು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಬಹುದು, ಎಂದು ಕೇಂದ್ರ ಸರಕಾರವು ಘೋಷಿಸಿದೆ. ಅದರ ಬಗ್ಗೆ ಚೌಧರಿ ಮೇಲಿನ ಹೇಳಿಕೆ ನೀಡಿದ್ದಾರೆ.

ಚೌಧರಿ ತಮ್ಮ ಮಾತನ್ನು ಮುಂದುವರೆಸುತ್ತಾ, ‘ಕಾಶ್ಮೀರಿ ಅಲ್ಲದವರು ಇಲ್ಲಿಗೆ ಬಂದು ನೆಲೆಸುತ್ತಾರೆ ಮತ್ತು ಅತ್ಯಾಚಾರದಂತಹ ಅಪರಾಧಗಳನ್ನು ಮಾಡುತ್ತಾರೆ ಎಂದು ನಾನು ಹೇಳುತ್ತಿಲ್ಲ; ಆದರೆ ಅಸ್ಸಾಂ ಮತ್ತು ಮಹಾರಾಷ್ಟ್ರದವರು ಏನು ಹೇಳಿದ್ದರೋ ಅದನ್ನೇ ನಾವು ಅದನ್ನೇ ಹೇಳುತ್ತಿದ್ದೇವೆ, ಹೊರಗಿನವರು ಇಲ್ಲಿಗೆ ಬರಬಾರದು, ಇಲ್ಲದಿದ್ದರೆ ಅವರು ಇಲ್ಲಿ ಉದ್ಯೋಗ ಕಸಿದುಕೊಳ್ಳುತ್ತಾರೆ. ಫರಿದಾಬಾದ್‌ನಲ್ಲಿ ಏನಾಯಿತು ಎಂದು ನೀವು ನೋಡಿರಬಹುದು. ಅಲ್ಲಿ ಹುಡುಗಿಯೊಬ್ಬಳನ್ನು ಗುಂಡಿಕ್ಕಿ ಕೊಲ್ಲಲಾಯಿತು, ಮತ್ತು ಹತ್ರಾಸ್‌ನಲ್ಲಿ ಏನಾಯಿತು ? ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಿವೆ, ಇವೆಲ್ಲವು ರಾಷ್ಟ್ರೀಯ ಚಾನೆಲ್‌ಗಳಲ್ಲಿ ತೋರಿಸಲಾಗುತ್ತಿದೆ” ಎಂದು ಹೇಳಿದರು.