‘ಆಶ್ರಮ’ ವೆಬ್ ಸೀರೀಸ್ ವಿರುದ್ಧ #PrakashJhaAttacksHinduFaith ಟ್ರೆಂಡ್

  • ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳು ಇಂತಹ ‘ಟ್ರೆಂಡ್’ಗಳನ್ನು ಮಾಡುವ ಮೂಲಕ ನ್ಯಾಯಕ್ಕಾಗಿ ಹೋರಾಡಬೇಕಾಗಿರುವುದು ನಾಚಿಕೆಯ ಸಂಗತಿಯಾಗಿದೆ !
  • ಹಿಂದೂಗಳಿಂದ ನಿರಂತರವಾಗಿ ವಿರೋಧವಾಗುತ್ತಿರುವಾಗ ಅದರತ್ತ ಗಮನ ಹರಿಸದವರು ಇತರ ಧರ್ಮದವರ ಧಾರ್ಮಿಕ ಭಾವನೆಗಳು ಈ ರೀತಿಯಾಗಿ ನೋಯಿಸಿದ್ದರೆ, ತಕ್ಷಣ ಅದರತ್ತ ಗಮನ ಹರಿಸುತ್ತಿದ್ದರು, ಹಿಂದೂಗಳಿ ಈಗ ಹೀಗೇ ಅನಿಸಲು ಆರಂಭವಾಗಿದೆ !

(ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗೆ ನೋವಾಗಬೇಕೆಂದೆಂದು ಪ್ರಕಾಶಿಸಿಲ್ಲ, ಬದಲಾಗಿ ಹೇಗೆ ವಿಡಂಬನೆ ಮಾಡಲಾಗಿದೆ ಎಂಬುದು ತಿಳಿಸಲು ಪ್ರಕಾಶಿಸಿದ್ದೇವೆ.)

ಮುಂಬಯಿ – ‘ಎಂ.ಎಕ್ಸ್. ಪ್ಲೆಯರ್’ ಈ ಓಟಿಟಿ ಆಪ್‌ನಿಂದ ನವೆಂಬರ್ ೧೧ ರಿಂದ ಪ್ರಸಾರವಾಗುತ್ತಿರುವ ನಿರ್ದೇಶಕ ಪ್ರಕಾಶ್ ಝಾ ಅವರ ವೆಬ್ ಸೀರೀಸ್ ‘ಆಶ್ರಮ’ದಲ್ಲಿ ಹಿಂದೂ ಸಾಧುಗಳ ಅವಮಾನಕರ ಚಿತ್ರಣವನ್ನು ಮಾಡಿದ್ದರಿಂದ ಅದಕ್ಕೆ ವಿರೋಧವಾಗುತ್ತಿದೆ. ಸಾಮಾಜಿಕ ಮಾಧ್ಯಮದಿಂದ ಈ ಬಗ್ಗೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಕೆಲವು ದಿನಗಳ ಹಿಂದೆ ಪ್ರಕಾಶ್ ಝಾ ಅವರನ್ನು ಬಂಧಿಸಲು ಅನೇಕರು ಅಭಿಯಾನವನ್ನು ನಡೆಸಿ ಅದು ಟ್ರೆಂಡ್ ಆಗಿತ್ತು. ಈಗ ‘#PrakashJhaAttacksHinduFaith’ ಈ ರೀತಿಯಲ್ಲೂ ಟ್ರೆಂಡ್ ಆಗಿದೆ.