ಪೊಲೀಸರು ಡಿಜೆ ಇದ್ದ ವಾಹನವನ್ನು ವಶಪಡಿಸಿಕೊಂಡಿದ್ದರಿಂದ ಗುಂಪಿನಿಂದ ಪೊಲೀಸ್ ಠಾಣೆ ಮೇಲೆ ಕಲ್ಲೆಸೆತ
|
ಬಿಲಾಸ್ಪುರ್ (ಛತ್ತೀಸ್‌ಗಡ್) – ಇಲ್ಲಿ ಅಕ್ಟೋಬರ್ ೨೭ ರ ರಾತ್ರಿ ತೆಲಿಪರಾ ದುರ್ಗೋತ್ಸವ ಸಮಿತಿಯ ಮೆರವಣಿಗೆ ನಗರ ಪೊಲೀಸ್ ಠಾಣೆ ಬಳಿ ಸಾಗುತ್ತಿದ್ದಾಗ ಪೊಲೀಸರು ಡಿಜೆ ಹಾಕಿರುವ ಕಾರಣವನ್ನು ತಿಳಿಸಿ ‘ಡಿಜೆ’ ಹಾಕಿದ್ದ ವಾಹನವನ್ನು ವಶಪಡಿಸಿಕೊಂಡರು. ಜೊತೆಗೆ ದೇವಿಯ ಮೂರ್ತಿ ಇರುವ ವಾಹನವನ್ನೂ ನಿಲ್ಲಿಸಿದರು. ಈ ಬಗ್ಗೆ ಸಮಿತಿಯ ಸದಸ್ಯರು ಪೊಲೀಸರಿಗೆ ಮನವಿ ಮಾಡಲು ಪ್ರಯತ್ನಿಸಿದರು; ಆದರೆ ಅವರು ಅದನ್ನು ಒಪ್ಪಲಿಲ್ಲ. ನಂತರ ವಾಗ್ವಾದಕ್ಕೆ ಕಾರಣವಾಯಿತು ಹಾಗೂ ಯಾರೋ ಪೊಲೀಸ್ ಠಾಣೆಗೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಇದರಿಂದಾಗಿ ಕಲೀಮ್ ಖಾನ್ ನೇತೃತ್ವದಲ್ಲಿ ಪೊಲೀಸರು ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿದರು. ಇದರ ಪರಿಣಾಮವಾಗಿ ಅಲ್ಲಿದ್ದ ಜನರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ನಂತರ ಪೊಲೀಸರು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿ ಮೂರ್ತಿಯನ್ನು ವಿಸರ್ಜನೆ ಮಾಡಿದರು.
Chhattisgarh: Police lathi-charge on Durga puja procession in Bilaspur for playing music, seize vehicles carrying idols for immersionhttps://t.co/slijRtBkgW
— OpIndia.com (@OpIndia_com) October 28, 2020
ಪೊಲೀಸ್ ನಿರೀಕ್ಷಕ ಕಲೀಮ್ ಖಾನ್ ಇವರು, ‘ಜನರ ಗುಂಪು ಪೊಲೀಸ್ ಠಾಣೆಗೆ ನುಗ್ಗಿದ್ದರಿಂದ ಅವರನ್ನು ಓಡಿಸಲು ಲಾಠಿಚಾರ್ಜ್ ಮಾಡಬೇಕಾಯಿತು. ಇದರ ವಿಡಿಯೋ ಕೂಡ ಇದೆ.’ ಎಂದು ಹೇಳಿದರು. ಪೊಲೀಸ್ ಅಧೀಕ್ಷಕ ಉಮೇಶ ಕಶ್ಯಪ ಇವರು, ಪೊಲೀಸ್ ಠಾಣೆಗೆ ನುಗ್ಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.