ಚಲನಚಿತ್ರ ನಿರ್ಮಿಸುವ ‘ಇರೋಸ್ ನೌ’ ಸಂಸ್ಥೆಯಿಂದ ನವರಾತ್ರಿಯ ಘೋರ ಅವಮಾನ

ಧರ್ಮಾಭಿಮಾನಿ ಹಿಂದೂಗಳ ವಿರೋಧದ ನಂತರ ಕ್ಷಮೆಯಾಚನೆ

ಹಿಂದೂ ದೇವತೆಗಳ ನಿರಂತರ ಅವಮಾನ, ಮತ್ತು ವಿರೋಧದ ನಂತರ ಕ್ಷಮೆಯಾಚಿಸುವ ಚಕ್ರ ನೋಡಿದರೆ ಸಂಬಂಧಪಟ್ಟವರ ವಿರುದ್ಧ ಅಪರಾಧವನ್ನು ದಾಖಲಿಸಿ ಸೆರೆಮನೆಗೆ ತಳ್ಳಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !

ನವ ದೆಹಲಿ – ಚಲನಚಿತ್ರವನ್ನು ನಿರ್ಮಿಸುವ ‘ಇರೋಸ್ ನೌ’ ಸಂಸ್ಥೆಯು ನವರಾತ್ರಿ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪೋಸ್ಟ್‌ಗಳನ್ನು ಪ್ರಸಾರ ಮಾಡಿತ್ತು. ಈ ಪೋಸ್ಟ್ ಮೂಲಕ ಪವಿತ್ರ ನವರಾತ್ರಿಯ ಅವಮಾನವಾಗಿತ್ತು. ಇದನ್ನು ಧರ್ಮಾಭಿಮಾನಿ ಹಿಂದೂಗಳು ವಿರೋಧಿಸಿದರು. ಇದರ ಬಗ್ಗೆ ಟ್ವಿಟರ್‌ನಲ್ಲಿ #BoycottErosNow ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿ ಈ ಮೂಲಕ ಬೃಹತ್ ಪ್ರಮಾಣದಲ್ಲಿ ವಿರೋಧ ವ್ಯಕ್ತವಾದ ಮೇಲೆ ‘ಇರೋಸ್ ನೌ’ ಕ್ಷಮೆಯಾಚಿಸಿದೆ.

‘ಇರೋಸ್ ನೌ’ ವಿರುದ್ಧ ಬಿಜೆಪಿಯ ಹರಿಯಾಣ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಅರುಣ್ ಯಾದವ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ನಂತರ #BoycottErosNow ಟ್ರೆಂಡ್ ಪ್ರಾರಂಭವಾಯಿತು. ‘ಇರೋಸ್’ ಮಾಡುತ್ತಿರುವ ತಾರತಮ್ಯವನ್ನು ತೋರಿಸುವಂತಹ ೨ ಫೋಟೋಗಳನ್ನು ಅರುಣ್ ಯಾದವ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಈ ಪೋಸ್ಟನಲ್ಲಿ ನವರಾತ್ರಿಯ ನಿಮಿತ್ತ ಕಾಮುಕ ಪದ್ದತಿಯಲ್ಲಿ ನಿಂತಿರುವ ನಟಿ ಕತ್ರಿನಾಳನ್ನು ತೋರಿಸಲಾಗಿದ್ದು, ಇನ್ನೊಂದು ಚಿತ್ರದಲ್ಲಿ ಈದ್ ನಿಮಿತ್ತ ಇರೋಸ್ ಸಭ್ಯ ಭಾಷೆಯಲ್ಲಿ ಶುಭಾಷಯವನ್ನು ನೀಡುತ್ತಿರುವಂತೆ ತೋರಿಸಲಾಗಿದೆ. ಇದರಿಂದ ಈದ್ ನಿಮಿತ್ತ ಇರೋಸ್ ಸಭ್ಯವಾಗಿ ವರ್ತಿಸಿದ್ದು ಹಿಂದೂಗಳಿಗೆ ಅಸಭ್ಯವಾಗಿ ಶುಭಾಷಯ ನೀಡುತ್ತಿರುವಂತೆ ತೋರಿಸಿದೆ. ಹಿಂದೂ ಹಬ್ಬವನ್ನು ಅಶ್ಲೀಲ ಭಾಷೆಯಲ್ಲಿ ಅಪಹಾಸ್ಯ ಮಾಡಲಾಗಿದೆ ಎಂಬುದು ಸ್ಪಷ್ಟವಾಯಿತು.

ಪೋಸ್ಟ್‌ನಲ್ಲಿ ಏನಿತ್ತು ?

ಅಕ್ಟೋಬರ್ ೧೭ ರಂದು ಘಟಸ್ಥಾಪನೆಯ ಮೊದಲನೆಯ ದಿನದಿಂದ ‘ಇರೋಸ್ ನೌ’ ತಾನು ನಿರ್ಮಿಸಿದ ಚಲನಚಿತ್ರಗಳಿಂದ ಕೆಲವು ಫೋಟೋ ಮತ್ತು ವೀಡಿಯೊಗಳನ್ನು ಪೋಸ್ಟ ಮಾಡಿದೆ. ನವರಾತ್ರಿಯಲ್ಲಿ ಪ್ರತಿದಿನ ವಿಭಿನ್ನ ಬಣ್ಣಗಳ ಮಹತ್ವವಿದೆ, ಎಂದು ಹೇಳುತ್ತಾ ನಟ ಮತ್ತು ನಟಿಯರ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಅದರ ಅಡಿಯಲ್ಲಿ ಬರಹವನ್ನು ಬರೆಯುವಾಗ ಅವರು ಅಶ್ಲೀಲವಾಗಿ ಬರೆದಿದ್ದರು.

೧. ನಟಿ ಕತ್ರಿನಾ ಅವರ ಚಿತ್ರವು ಕಾಮಪ್ರಚೋದಕವಾಗಿದ್ದು, ಅದರಲ್ಲಿ ‘ಡಿಡ್ ಯು ವಾಂಟ್ ಟು ಪುಟ್ ದ ‘ರಾತ್ರಿ’ ಇನ್ ಮೈ ನವರಾತ್ರಿ ?’ ಎಂದು ಬರೆಯಲಾಗಿತ್ತು.

೨. ಸಲ್ಮಾನ್ ಖಾನ್ ಅವರ ಚಿತ್ರದಲ್ಲಿ ‘ಯೂ ನೀಡ್ ಅ ದಾಂಡಿ ಟು ಪ್ಲೇ ದಾಂಡಿಯಾ – ಐ ಹ್ಯಾವ್ ವನ್’ ಎಂದು ವಾಕ್ಯವಿತ್ತು.

೩. ನಟ ರಣವೀರ್ ಸಿಂಗ್ ಅವರ ಚಿತ್ರದಲ್ಲಿ ‘ಲೆಟ್ಸ್ ಹ್ಯಾವ್ ಸಮ್ ಮಜಾಮಾ, ಇನ್ ಮೈ ಪಜಾಮಾ’ ಎಂಬ ಅಶ್ಲೀಲ ವಾಕ್ಯವಿತ್ತು.

ಇರೋಸ್ ನೌ ಕ್ಷಮೆಯಾಚನೆ

‘ಇರಾಸ್ ನೌ’ ಕ್ಷಮೆಯಾಚಿಸುತ್ತಾ, ‘ನಾವು ಎಲ್ಲ ಸಂಸ್ಕೃತಿಗಳನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ; ಯಾರ ಭಾವನೆಗಳನ್ನು ನೋಯಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ನಾವು ಸಂಬಂಧಿತ ಪೋಸ್ಟ್ ಅನ್ನು ಸಹ ಅಳಿಸಿದ್ದು, ಕ್ಷಮೆಯಾಚಿಸುತ್ತೇವೆ’ ಎಂದು ಪ್ರಕಟಣೆ ನೀಡಿದೆ.