‘ತನಿಷ್ಕ ಜ್ಯುವೆಲರಿ’ಯಿಂದ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡುವ ಜಾಹೀರಾತು

  • ಮುಸಲ್ಮಾನ ಯುವಕನೊಂದಿಗೆ ಮದುವೆಯಾದ ನಂತರ ಗರ್ಭಿಣಿಯಾದ ಹಿಂದೂ ಯುವತಿಯ ಸೀಮಂತ

  • ಟ್ವಿಟರ್‌ನಲ್ಲಿ ‘#BoycottTanishq’ ಹೆಸರಿನ ‘ಹ್ಯಾಶ್‌ಟ್ಯಾಗ್’ ‘ಟ್ರೆಂಡ್’ನಿಂದ ವಿರೋಧ

  • ಓರ್ವ ಹಿಂದೂ ಯುವಕನನ್ನು ಮದುವೆಯಾದ ನಂತರ ಗರ್ಭಿಣಿಯಾದ ಮುಸಲ್ಮಾನ ಹುಡುಗಿಯ ಸೀಮಂತದ ಚಿತ್ರಣ ನೀಡುವ ಬಗ್ಗೆ ಏಕೆ ವಿಚಾರವಾಗಲಿಲ್ಲ ? ಹೀಗೆ ಯಾರಾದರೂ ಪ್ರಶ್ನಿಸಿದರೆ, ಅದರಲ್ಲಿ ತಪ್ಪೇನಿದೆ ? ಇಂತಹ ಜಾಹೀರಾತು ಮಾಡುತ್ತಿದ್ದರೆ, ದೇಶದ ಮತಾಂಧರು ಅದನ್ನು ಒಪ್ಪಿಕೊಳ್ಳುತ್ತಿದ್ದರೇ ?
  • ಜಾಹೀರಾತಿನಲ್ಲಿ ಹೀಗೆ ತೋರಿಸಬಹುದು; ಆದರೆ ನಿಜಸ್ಥಿತಿ ಇದರ ತದ್ವಿರುದ್ಧವಾಗಿದೆ. ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಸಿಲುಕಿಸಿ ಆಕೆಯನ್ನು ಮತಾಂತರಗೊಳಿಸಿ ಆಕೆಯೊಂದಿಗೆ ಮದುವೆಯಾದ ನಂತರ ಆಕೆಯ ಮೇಲೆ ಅತ್ಯಾಚಾರ ಮಾಡುವ ಸಾವಿರಾರು ಘಟನೆಗಳು ಇಲ್ಲಿಯವರೆಗೆ ದೇಶದಲ್ಲಿ ನಡೆದಿವೆ ಹಾಗೂ ನಡೆಯುತ್ತಿವೆ. ಜಾಹೀರಾತಿನಲ್ಲಿ ತೋರಿಸಿರುವಂತೆ ದೇಶದಲ್ಲಿ ಈ ರೀತಿಯಲ್ಲಿ ಒಂದಾದರೂ ಘಟನೆ ನಡೆದಿರುವ ಅಥವಾ ಎಂದಾದರೂ ಆಗಬಹುದೇ ? ಎಂಬುದು ಸಂಶೋಧನೆಯ ವಿಷಯವಾಗಬಹುದು !

ನವ ದೆಹಲಿ – ‘ತನಿಷ್ಕ ಜ್ಯುವೆಲ್ಲರಿ’ ಈ ಆಭರಣಗಳ ಅಂಗಡಿಯ ಜಾಹೀರಾತಿನಿಂದ ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳುತ್ತಾ ಸಾಮಾಜಿಕ ಮಾಧ್ಯಮದಿಂದ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟರ್‌ನಲ್ಲಿ ‘#BoycottTanishq’ ಎಂಬ ಹೆಸರಿನ ‘ಹ್ಯಾಶ್‌ಟ್ಯಾಗ್’ ‘ಟ್ರೆಂಡ್’ ನಿಂದ ವಿರೋಧಿಸಲಾಗುತ್ತಿದೆ.

೧. ಈ ಅಂಗಡಿಯ ಜಾಹೀರಾತನ್ನು ಅಕ್ಟೋಬರ್ ೯ ರಂದು ಪ್ರಸಾರ ಮಾಡಲಾಗಿದೆ. ಇದರಲ್ಲಿ ಓರ್ವ ಗರ್ಭಿಣಿ ಹಿಂದೂ ಮಹಿಳೆಯ ಸೀಮಂತ ಮಾಡುವುದನ್ನು ತೋರಿಸಲಾಗಿದೆ. ವಿಶೇಷವೆಂದರೆ ಈ ಹಿಂದೂ ಮಹಿಳೆಯನ್ನು ಮುಸಲ್ಮಾನನ ಪತ್ನಿ ಎಂದು ತೋರಿಸಲಾಗಿದೆ.

೨. ಈ ಮಹಿಳೆ ಸಾಂಪ್ರದಾಯಿಕ ಹಿಂದೂ ಪದ್ದತಿಯಂತೆ ವೇಶವನ್ನು ಧರಿಸಿದ್ದು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಂಡಿದ್ದಾಳೆ. ಆಕೆಯೊಂದಿಗೆ ಓರ್ವ ವಯಸ್ಸಾದ ಮುಸಲ್ಮಾನ ಮಹಿಳೆಯನ್ನು ತೋರಿಸಲಾಗಿದೆ. ಅವಳು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಂಡಿಲ್ಲ.

೩. ಈ ಮನೆಯ ಮಹಿಳೆಯರು ಈ ಹಿಂದೂ ಮಹಿಳೆಯನ್ನು ಉದ್ಯಾನವನಕ್ಕೆ ಕರೆದೊಯ್ಯುತ್ತಾರೆ ಹಾಗೂ ಆಕೆಯ ಕುತ್ತಿಗೆಗೆ ಚಿನ್ನದ ಹಾರವನ್ನು ಹಾಕುತ್ತಾರೆ. ಈ ಪ್ರಸಂಗದಲ್ಲಿ ದೀಪಗಳನ್ನು ಬೆಳಗಿಸುತ್ತಿರುವುದು ತೋರಿಸಲಾಗಿದ್ದು ನಟರಾಜನ ವಿಗ್ರಹವೂ ಇದೆ. ಇದರಿಂದ ಮುಸಲ್ಮಾನ ಕುಟುಂಬವನ್ನು ಸಹಿಷ್ಣುಗಳು ಎಂದು ತೋರಿಸಲಾಗಿದೆ.

೪. ಈ ಸಮಯದಲ್ಲಿ ಹಿಂದೂ ಮಹಿಳೆ ತನ್ನ ಮುಸಲ್ಮಾನ ಅತ್ತೆಗೆ, ‘ನಿಮ್ಮ ಮನೆಯಲ್ಲಿ ಇಂತಹ ಕೃತಿಗಳು ನಡೆಯುವುದಿಲ್ಲ ? ಎಂದು ಕೇಳಿದಾಗ ಅವರು ‘ಹುಡುಗಿಯನ್ನು ಆನಂದದಿಂದ ಇರುವ ಕೃತಿಯು ಪ್ರತಿಯೊಂದು ಮನೆಯಲ್ಲಿ ಆಗುವುದಿಲ್ಲವೇ ? ಎಂದು ಹೇಳುತ್ತಾರೆ.