‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಬ್ಯಾಂಕ್ ಖಾತೆಯಿಂದ ೬ ಲಕ್ಷ ರೂಪಾಯಿ ಕದ್ದ ಕಳ್ಳರು

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲೆ ಶ್ರೀರಾಮಮಂದಿರದ ನಿರ್ಮಾಣಕಾರ್ಯವು ಆರಂಭವಾಗಿದೆ. ಅದಕ್ಕಾಗಿ ಭಕ್ತರು ದೇವಸ್ಥಾನದ ಟ್ರಸ್ಟ್‌ಗೆ ಅರ್ಪಣೆಯನ್ನು ನೀಡುತ್ತಿದ್ದಾರೆ. ಅದಕ್ಕಾಗಿ ಟ್ರಸ್ಟ್ ತೆರೆದಿದ್ದ ಬ್ಯಾಂಕ್ ಖಾತೆಯಲ್ಲಿ ಈ ಮೊತ್ತವನ್ನು ಜಮೆ ಮಾಡಲಾಗುತ್ತಿದೆ. ಈ ಬ್ಯಾಂಕಿನ ಖಾತೆಯಿಂದ ೬ ಲಕ್ಷ ರೂಪಾಯಿಗಳ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

೧. ಕಳ್ಳನು ‘ಕ್ಲೋನ್’ ಚೆಕ್‌ಅನ್ನು ಉಪಯೋಗಿಸಿ ಈ ಹಣವನ್ನು ತೆಗೆದಿದ್ದಾನೆ. ‘ಕ್ಲೋನ್’ ಚೆಕ್ ಅಂದರೆ ಒಂದೇ ರೀತಿಯಲ್ಲಿ ಕಾಣಿಸುವ ಚೆಕ್ ಇದನ್ನು ಉಪಯೋಗಿಸಿ ಮೋಸಗಾರರು ಈ ಹಿಂದೆ ೨ ಬಾರಿ ಟ್ರಸ್ಟ್‌ನ ಬ್ಯಾಂಕಿನ ಖಾತೆಯಿಂದ ಮೊತ್ತವನ್ನು ತೆಗೆದಿದ್ದರು. ಮೂರನೇ ಬಾರಿ ಮೊತ್ತವನ್ನು ತೆಗೆಯಲು ಪ್ರಯತ್ನಿಸುತ್ತಿರುವಾಗ ಬ್ಯಾಂಕ್ ಸಿಬ್ಬಂದಿಯು ದೊಡ್ಡ ಮೊತ್ತ ಇರುವ ಕಾರಣ ಅದನ್ನು ಪಾವತಿಸಲು ಅನುಮತಿ ಕೋರಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಇವರಿಗೆ ದೂರವಾಣಿ ಕರೆ ಮಾಡಿದ್ದರು. ಆ ಸಮಯದಲ್ಲಿ ಈ ಘಟನೆಯು ಬೆಳಕಿಗೆ ಬಂದಿತು. ಅಯೋಧ್ಯೆ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಜ್ಞಾತರ ವಿರುದ್ಧ ಅಪರಾಧವನ್ನು ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.

೨. ಅಯೋಧ್ಯೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಟ್ರಸ್ಟಿನ ಖಾತೆ ಇದೆ. ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಹಾಗೂ ಕಾರ್ಯದರ್ಶಿ ಡಾ. ಅನಿಲ ಮಿಶ್ರಾ ಇವರಲ್ಲಿ ಬ್ಯಾಂಕ್ ಖಾತೆಯ ಎಲ್ಲ ಅಧಿಕಾರಗಳಿವೆ. ಮೋಸಗಾರರು ಸೆಪ್ಟೆಂಬರ್ ೧ ರಂದು ಮೊದಲ ಬಾರಿ ಲಕ್ಷ್ಮಣಪುರಿಯಿಂದ ಕ್ಲೋನ್ ಚೆಕ್ ಮೂಲಕ ಕೆಲವು ಮೊತ್ತವನ್ನು ಪಂಜಾಬ ನ್ಯಾಶನಲ್ ಬ್ಯಾಂಕಿನ ಒಂದು ಖಾತೆಗೆ ಜಮೆ ಮಾಡಿದ್ದರು. ನಂತರ ಸಪ್ಟೆಂಬರ ೮ ರಂದು ಮತ್ತೊಮ್ಮೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಖಾತೆಗೆ ಮೊತ್ತವನ್ನು ಜಮೆ ಮಾಡಿದ್ದರು. ಒಟ್ಟು ೬ ಲಕ್ಷವನ್ನು ಮೋಸದಿಂದ ಬೇರೆ ಖಾತೆಗೆ ಜಮೆ ಮಾಡಲಾಗಿದೆ.

೩. ಈ ಹಿಂದೆ ದೇವಸ್ಥಾನದ ನಿರ್ಮಾಣಕ್ಕಾಗಿ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಹೆಸರಿನಲ್ಲಿ ಅನೇಕ ಜನರು ಸುಳ್ಳು ಬ್ಯಾಂಕ್ ಖಾತೆಯನ್ನು ತೆರೆದಿರುವ ಪ್ರಕರಣಗಳು ಗಮನಕ್ಕೆ ಬಂದಿವೆ.