‘ಇಸ್ಲಾಮಿನ ಪರವಾಗಿ ನಿಂತರೆ, ಐ.ಎ.ಎಸ್. ಹಾಗೂ ಐ.ಪಿ.ಎಸ್. ಅಧಿಕಾರಿಗಳಾಗಬಹುದು (ಅಂತೆ) !’- ಡಾ. ಝಾಕಿರ ನಾಯಿಕ್‌ನಿಂದ ಮುಸಲ್ಮಾನರಿಗೆ ಸಲಹೆ

ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಐ.ಎ.ಎಸ್. ಹಾಗೂ ಐ.ಪಿ.ಎಸ್. ಅಧಿಕಾರಿಗಳಾಗುತ್ತಿದ್ದಾರೆ. ಒಂದು ವೇಳೆ ಅದರಲ್ಲಿ ಕೆಲವರು ಡಾ. ಝಾಕಿರ್‌ನ ಸಲಹೆಯನ್ನು ಅನುಸರಿಸಿದರೆ ಏನಾಗಬಹುದು, ಇದರ ಬಗ್ಗೆ ಕೇಂದ್ರ ಸರಕಾರವು ವಿಚಾರ ಮಾಡಬೇಕಿದೆ !

ನವ ದೆಹಲಿ – ಒಂದು ವೇಳೆ ನಿಮಗೆ ಐ.ಎ.ಎಸ್. (ಭಾರತೀಯ ಆಡಳಿತ ಸೇವೆ) ಹಾಗೂ ಐ.ಪಿ.ಎಸ್. (ಭಾರತೀಯ ಪೊಲೀಸ್ ಸೇವೆ) ಅಧಿಕಾರಿ ಆಗುವುದಿದ್ದರೆ, ನಿಮಗೆ ಇಸ್ಲಾಮ್‌ನ ಪರವಾಗಿ ನಿಲ್ಲಬೇಕಾಗುತ್ತದೆ, ಎಂದು ಭಯೋತ್ಪಾದಕರಿಗೆ ಆದರ್ಶಪ್ರಾಯವಾಗಿರುವ ಡಾ. ಝಾಕಿರ ನಾಯಿಕ್ ಒಂದು ವಿಡಿಯೋ ಮೂಲಕ ಮುಸಲ್ಮಾನರಿಗೆ ಸಲಹೆಯನ್ನು ನೀಡಿದ್ದಾನೆರೆ. ಡಾ. ಝಾಕಿರ ನಾಯಿಕ್ ಸಧ್ಯ ಮಲೇಶಿಯಾದಲ್ಲಿದ್ದು ಅಲ್ಲಿಂದ ಈ ವಿಡಿಯೋವನ್ನು ಮಾಡಿದ್ದಾರೆನೆ.

೧. ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ಡಾ. ಝಾಕಿರಗೆ ಇವರಲ್ಲಿ, ಐ.ಎ.ಎಸ್. ಅಧಿಕಾರಿಯಾಗಲು ಸಾಧ್ಯವಿದೆಯೇ ? ಎಂಬ ಪ್ರಶ್ನೆಯನ್ನು ಕೇಳಿದಾಗ, ಅದಕ್ಕೆ ಉತ್ತರವನ್ನು ನೀಡಿದನೀಡುತ್ತಾ ಡಾ. ಝಾಕಿರ ನಾಯಕ್‌ಇವರು, ‘ಇದು ಅಸಾಧ್ಯವಿಲ್ಲ; ಆದರೆ ಕಷ್ಟವಿದೆ. ಒಂದು ವೇಳೆ ಓರ್ವ ಮುಸಲ್ಮಾನನು ಅಧಿಕಾರಿಯಾದರೆ, ಆತ ತನ್ನ ಸಹೋದ್ಯೋಗಿಗಳಿಂದ ಹೆದರಬಹುದು. ಯಾವಾಗ ಅವರ ಸಹೋದ್ಯೋಗಿಗಳು ಇಸ್ಲಾಮ್ ಅಥವಾ ಪೈಗಂಬರ್ ಬಗ್ಗೆ ಆಕ್ಷೇಪಾರ್ಹವಾಗುವಂತೆ ಏನಾದರು ಮಾಡಿದರೆ, ನೀವು ಅವರಿಗೆ ಉತ್ತರಿಸಬಹುದೇ ? ಆ ಸಮಯದಲ್ಲಿ ನಿಮಗೆ ಧೈರ್ಯ ಬರಬಹುದೇ ? ಒಂದುವೇಳೆ ನೀವು ಭಯದಿಂದ ಹಾಗೂ ನಾಚಿಕೊಂಡರೆ, ನೀವು ಅಂತಹ ನೌಕರಿಯನ್ನು ಮಾಡದಿರಿ. ಒಂದು ವೇಳೆ ನೀವು ಅವರಿಗೆ ಉತ್ತರಿಸಬಹುದು ಹಾಗೂ ನೀವು ತಡೆಗಟ್ಟಬಹುದು ಎಂದಿದ್ದರೆ ನೀವು ಮುಂದೆ ಹೋಗಬಹುದು. ನೀವು ಒಂದು ಪ್ರಬಲ ವ್ಯಕ್ತಿಯಾಗಿದ್ದೀರಿ ಹಾಗೂ ಮುಸಲ್ಮಾನರೇತರ ಟೀಕೆಗಳನ್ನು ಎದುರಿಸಬಹುದಾದರೆ, ಅದೇರೀತಿ ಲಂಚಗುಳಿತನದಿಂದ ದೂರ ಇರುವಿರೋ, ಹಾಗಿದ್ದರೆ ನೀವು ಇಂತಹ ಕೆಲಸವನ್ನು ಮಾಡಬಹುದು.

೨. ಈ ಸಮಯದಲ್ಲಿ ಡಾ. ಝಾಕಿರ ಇವನು ಇಸ್ಲಾಮಿನ ತತ್ತ್ವಗಳನ್ನು ಪಾಲಿಸದಿರುವ ಕೆಲವು ಮುಸಲ್ಮಾನ ಅಧಿಕಾರಿಗಳ ಉದಾಹರಣೆಗಳನ್ನು ನೀಡಿದನು.

೩. ಡಾ. ಝಾಕಿರ ಇವನು, ಎಲ್ಲರೂ ಹಾಗಿಲ್ಲ; ಆದರೆ ಹೆಚ್ಚಿನ ಐ.ಪಿ.ಎಸ್. ಅಧಿಕಾರಿಗಳು ಭ್ರಷ್ಟರಾಗಿರುತ್ತಾರೆ. ಯಾರಾದರೂ ಪ್ರಾಮಾಣಿಕವಾಗಿದ್ದರೆ, ಅವರಿಗೆ ಭ್ರಷ್ಟರಾಗಬೇಕಾಗುತ್ತದೆ ಅಥವಾ ಕೆಲಸ ಬಿಡಬೇಕಾಗುತ್ತದೆ; ಏಕೆಂದರೆ ಅಲ್ಲಿಯ ವಾತಾವರಣವೇ ಹೇಗಿದೆಯೆಂದರೆ, ನೀವು ಇತರ ಅಧಿಕಾರಿಗಳೊಂದಿಗೆ ಸಹಮತ ಇಲ್ಲದಿದ್ದರೆ, ಅವರು ನಿಮಗೆ ಬದುಕುವುದನ್ನು ಕಠಿಣ ಮಾಡಿಬಿಡುತ್ತಾರೆ ಎಂದು ಆರೋಪಿಸಿದರು.