|
ಏಕ್ತಾ ಕಪೂರ ಇವರ ‘ಬಾಲಾಜಿ ಟೆಲಿಫಿಲ್ಮ್’ನಿಂದ ಈ ಹಿಂದೆಯೂ ರಾಷ್ಟ್ರ ಹಾಗೂ ಧರ್ಮವನ್ನು ಅವಮಾನ ಮಾಡುವ ವೆಬ್ ಸಿರಿಸ್ ನಿರ್ಮಿಸಲಾಗಿದೆ; ಆದರೆ ಈ ಬಗ್ಗೆ ಕೇಂದ್ರ ಸರಕಾರವು ಯಾವುದೇ ರೀತಿಯ ಕಾನೂನನ್ನು ರೂಪಿಸದ ಕಾರಣ ಈ ಸರಣಿಯ ಮೇಲೆ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಲಿಲ್ಲ. ಈಗಲಾದರೂ ಕೇಂದ್ರ ಸರಕಾರ ತಕ್ಷಣವೇ ಕಾನೂನನ್ನು ರೂಪಿಸಿ ಇಂತಹ ವೆಬ್ ಸಿರಿಸ್ ಹಾಗೂ ಅದರ ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳುವುದೇ ?
ಇಂದೂರ್(ಮಧ್ಯಪ್ರದೇಶ) – ‘ಝಿ ೫’ ಹಾಗೂ ಆಲ್ಟ್ ಬಾಲಾಜಿ
ಈ `ಆಪ್’ ಮೇಲೆ ಪ್ರಸಾರವಾಗುವ ‘ವರ್ಜಿನ್ ಭಾಸ್ಕರ’ ಈ ವೆಬ್ ಸಿರಿಸ್‌ನಲ್ಲಿ ‘ಪುಣ್ಯಶ್ಲೋಕ ಅಹಿಲ್ಯಾದೇವಿ ಗರ್ಲ್ ಹಾಸ್ಟೆಲ್’ನ ಹೆಸರು ಹಾಗೂ ಅಲ್ಲಿಯ ಪ್ರಸಂಗಗಳನ್ನು ತೋರಿಸಲಾಗುತ್ತಿದೆ. ಈ ಸರಣಿಯಲ್ಲಿ ಶಾರೀರಿಕ ಸಂಬಂಧದ ಬಗ್ಗೆ ಮಂಡಿಸಲಾಗಿದೆ. ಇಂತಹ ಸರಣಿಯಲ್ಲಿ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಇವರ ಹೆಸರನ್ನು ಉಲ್ಲೇಖಿಸಿ ಅವರ ಅವಮಾನವನ್ನು ಮಾಡಲಾಗುತ್ತಿದೆ. ಈ ಸರಣಿಯನ್ನು ನಿರ್ಮಾಪಕಿ ಏಕ್ತಾ ಕಪೂರ್ ಇವರ ‘ಬಾಲಾಜಿ ಟೆಲಿಫಿಲ್ಮ’ನವರು ಮಾಡಿದ್ದಾರೆ. ಅಹಿಲ್ಯಾದೇವಿ ಹೋಳಕರ ಇವರ ವಂಶಜರಾದ ಶ್ರೀಮಂತ ಭೂಷಣಸಿಂಹಜಿರಾಜೆ ಹೋಳಕರ ಮಹಾರಾಜ ಇವರು ಏಕ್ತಾ ಕಪೂರ್ ಇವರಿಗೆ ಪತ್ರವನ್ನು ಕಳಿಸಿ ಇದರ ಬಗ್ಗೆ ತಿಳುವಳಿಕೆಯನ್ನು ನೀಡುತ್ತಾ ತಪ್ಪನ್ನು ಸುಧಾರಿಸಿ ಕ್ಷಮೆಯನ್ನು ಕೇಳಬೇಕು, ಎಂದು ಆಗ್ರಹಿಸಿದ್ದಾರೆ.
ಶ್ರೀಮಂತ ಭೂಷಣಸಿಂಹಜಿ ರಾಜೆ ಹೋಳಕರ ಮಹಾರಾಜರು ಕಳುಹಿಸಿದ ಪತ್ರದಲ್ಲಿ ಮುಂದಿನಂತೆ ಹೇಳಿದ್ದಾರೆ,
೧. ಈ ರೀತಿಯ ಹೆಸರನ್ನು ನೀಡುವ ನಿಮ್ಮ ವಿಕೃತ ಮಾನಸಿಕತೆಯನ್ನು ನಾವು ಖಂಡಿಸುತ್ತೇವೆ. ಪುಣ್ಯಶ್ಲೋಕ ಅಹಿಲ್ಯಾದೇವಿಯವರ ಹೆಸರನ್ನು ಈ ರೀತಿಯಲ್ಲಿ ಉಪಯೋಗಿಸುವ ಅಧಿಕಾರವನ್ನು ನಿಮಗೆ ಯಾರು ನೀಡಿದರು ?
೨. ಇಂದು ನೀವು ಯಾವ ಸ್ವಾತಂತ್ರ್ಯದಲ್ಲಿ ಇದ್ದೀರಿ ಆ ಸ್ವಾತಂತ್ರ್ಯವನ್ನು ಪಡೆಯುವ ಕಾರ್ಯ ಅಹಿಲ್ಯಾದೇವಿಯವರಂತಹ ಬಲಿದಾನದಿಂದಾಗಿ ಸಿಕ್ಕಿದೆ. ಇದನ್ನು ನೀವು ಮರೆತ್ತಿದ್ದೀರಿ.
೩. ನಿಮ್ಮಿಂದ ಆಗಿರುವ ಅವಮಾನದಿಂದಾಗಿ ಭಾರತೀಯರ ಭಾವನೆಗೆ ಧಕ್ಕೆಯಾಗಿದೆ. ನೀವು ಕೂಡಾ ಓರ್ವ ಮಹಿಳೆಯಾಗಿ ದೇಶದ ಓರ್ವ ಮಹಾನ ಮಹಿಳೆಯನ್ನು ಅವಮಾನಿಸುವುದು ನಿಮಗೆ ಶೋಭಿಸುವುದಿಲ್ಲ. ನೀವು ಮಾಡಿದ ತಪ್ಪಿಗಾಗಿ ಕ್ಷಮೆ ಯಾಚಿಸಬೇಕು ಹಾಗೂ ಆ ತಪ್ಪನ್ನು ಸುಧಾರಿಸಿಕೊಂಡು ಮುಂದೆ ಈ ರೀತಿಯಲ್ಲಿ ತಪ್ಪಾಗದಂತೆ ಗಮನದಲ್ಲಿಡಿ ಎಂದು ತಿಳಿಸಿದ್ದಾರೆ.