‘ಫೇಸಬುಕ್’ನ ಪಕ್ಷಪಾತ’ ಈ ವಿಷಯದಲ್ಲಿ ‘ಆನ್‌ಲೈನ್’ ವಿಶೇಷ ವಿಚಾರಸಂಕಿರಣದ ಆಯೋಜನೆ

ಹಿಂದೂವಿರೋಧಿ ‘ಫೇಸಬುಕ್’ನ ದಬ್ಬಾಳಿಕೆ ವಿರುದ್ಧ ಸಂಘರ್ಷ ಮಾಡಲು ಪಣತೊಟ್ಟ ಹಿಂದೂಗಳು

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರುವಾಗ ‘ಫೇಸಬುಕ್’ ದಬ್ಬಾಳಿಕೆ ನಿಲುವು ತೋರುತ್ತಾ ಕೇವಲ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಫೇಸಬುಕ್ ಪೇಜ್ ಬಂದ್ ಮಾಡುತ್ತಿದೆ. ಇನ್ನೊಂದೆಡೆ ಹಿಂಸಾಚಾರ ಮಾಡುವ ಉಗ್ರರ ಮತ್ತು ಅವರ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಸಲೀಸಾಗಿ ವಿಷಕಕ್ಕುತ್ತಾ ಪ್ರಚಾರ ಮಾಡುತ್ತಿವೆ. ಹಿಂದೂಬಹುಸಂಖ್ಯಾತ ದೇಶದಲ್ಲಿ ಹಿಂದೂಗಳದ್ದೇ ಧ್ವನಿ ಅದುಮುವ ಆಕ್ರೋಶಕಾರಿ ಕೃತ್ಯವನ್ನು ‘ಫೇಸಬುಕ್’ ಆರಂಭಿಸಿದೆ. ಹಿಂದೂವಿರೋಧಿ ‘ಫೇಸಬುಕ್’ನ ಈ ಪಕ್ಷಪಾತವನ್ನು ಬಯಲಿಗೆಳೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ 6 ಸೆಪ್ಟೆಂಬರ್ 2020 ರಂದು ರಾತ್ರಿ 8.30 ರಿಂದ 9.30 ಈ ಅವಧಿಯಲ್ಲಿ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಶೇಷ ವಿಚಾರ ಸಂಕಿರಣದಲ್ಲಿ ಫೇಸ್‌ಬುಕ್ ಕಾ ಪಕ್ಷಪಾತ : ಹಿಂದುವೊಂಕೆ ‘ಪೇಜ್ ಬಂದ್, ಆತಂಕಿಯೋಕೆ ಚಾಲು !’ ಈ ವಿಷಯದ ಮೇಲೆ ‘ಆನ್‌ಲೈನ್’ ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಹಾಗಾಗಿ ಹೆಚ್ಚೆಚ್ಚು ಹಿಂದೂಗಳು ಈ ಕಾರ್ಯಕ್ರಮವನ್ನು ವೀಕ್ಷಿಸಬೇಕು ಮತ್ತು ‘ಫೇಸಬುಕ್’ನ ಈ ಪಕ್ಷಪಾತವನ್ನು ಖಂಡಿಸಬೇಕು, ಎಂದೂ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.

ಈ ‘ವಿಶೇಷ ಚರ್ಚಾಕೂಟ’ದಲ್ಲಿ ‘ಫೇಸ್‌ಬುಕ್’ ಇತ್ತೀಚೆಗೆ ಯಾರ ಪುಟಗಳನ್ನು ಬಂದ್ ಮಾಡಿದೆಯೋ, ಅವರು ಭಾಜಪದ ತೆಲಂಗಾಣದ ಶಾಸಕ ಹಾಗೂ ಪ್ರಖರ ಹಿಂದುತ್ವನಿಷ್ಠ ಟಿ. ರಾಜಾಸಿಂಹ, ‘ಸೋಶಿಯಲ್ ಮೀಡಿಯಾ’ದ ಅಭ್ಯಸಕರಾದ ಶ್ರೀ. ಅಭಿವನ ಖರೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರರಾದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಹಾಗೂ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂಜಾಗೃತಿ’ ಈ ‘ಯು-ಟ್ಯುಬ್’ ಚಾನಲ್ ಮೂಲಕ, ಅದೇರೀತಿ www.hindujagruti.org ಈ ಜಾಲತಾಣದಿಂದ ನೇರ ಪ್ರಸಾರವಾಗಲಿದೆ.

ಈ ಕಾರ್ಯಕ್ರಮವನ್ನು ವೀಕ್ಷಿಸಲು ಲಿಂಕ್ :

Youtube.com/HinduJagruti
www.hindujagruti.org