‘ಬಾಬರಿ ಮಸೀದಿ ಇತ್ತು ಮತ್ತು ಇರಲಿದೆ (ಯಂತೆ) !’ – ಅಸದುದ್ದೀನ್ ಓವೈಸಿ

  • ರಝಾಕರರ ವಂಶದವರಂತೆ ಇಂತಹ ಹೇಳಿಕೆಗಳನ್ನು ನೀಡಲಾಗುತ್ತದೆ; ಆದರೆ ಇನ್ನು ಮುಂದೆ ಇಂತಹವರ ಕಡೆಗೆ ಯಾರೂ ಗಮನ ಕೊಡುವ ಆವಶ್ಯಕತೆಯಿಲ್ಲ, ಎಂದು ಹಿಂದೂಗಳಿಗೆ ಅನಿಸುತ್ತದೆ !

  • ಇದು ಸರ್ವೋಚ್ಚ ನ್ಯಾಯಾಲಯದ ಅವಮಾನವಲ್ಲವೇ ? ನ್ಯಾಯಾಲಯವು ಇಂತಹವರಿಗೆ ಶಿಕ್ಷೆಯನ್ನು ಕೊಡಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಭಾಗ್ಯನಗರ (ತೆಲಂಗಾಣಾ) – ‘ಬಾಬರಿ ಮಸೀದಿ ಇತ್ತು, ಇದೆ ಮತ್ತು ಅದು ಇರಲಿದೆ. ಇನ್ಶಾ ಅಲ್ಲಾ’, ಎಂದು ಎಂಐಎಂ ನ ಅಧ್ಯಕ್ಷ ಸಾಂಸದ ಅಸದುದ್ದೀನ್ ಓವೈಸಿ ಇವರು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅದರೊಂದಿಗೆ ಅವರು ಬಾಬ್ರಿಯ ಹಳೆಯ ಛಾಯಾಚಿತ್ರಗಳು ಹಾಗೂ ರಾಮ ಜನ್ಮಭೂಮಿ ಆಂದೋಲನದ ಸಮಯದಲ್ಲಿ ಬಾಬರಿಯನ್ನು ಕೆಡಹುವ ಸಮಯದಲ್ಲಿನ ಛಾಯಾಚಿತ್ರಗಳನ್ನೂ ಅವರು ಪ್ರಸಾರ ಮಾಡಿದ್ದಾರೆ. ಅದಕ್ಕಾಗಿ ಅವರು #ಃಚಿbಡಿiZiಟಿಜಚಿಊಚಿi ಎಂಬ ಹ್ಯಾಶ್‌ಟ್ಯಾಗ್ ಅನ್ನು ಉಪಯೋಸಿದ ನಂತರ ಅದು ‘ಟ್ರೆಂಡ್’ನಲ್ಲಿ ಬಂದಿತ್ತು.