ರಾಜಸ್ಥಾನದಿಂದ ಕದ್ದ ಶಿವನ ೯ ನೇ ಶತಮಾನದ ವಿಗ್ರಹವನ್ನು ೨೨ ವರ್ಷಗಳ ನಂತರ ಲಂಡನ್‌ನಿಂದ ಹಿಂದೆ ಸಿಗಲಿದೆ !

ಲಂಡನ್ – ರಾಜಸ್ಥಾನದ ಬರೌಲಿಯಲ್ಲಿನ ಶ್ರೀ ಘಾಟೇಶ್ವರ ದೇವಸ್ಥಾನದಿಂದ ಭಗವಾನ ಶಿವನ ೯ ನೇ ಶತಮಾನದ ಅತೀಪ್ರಾಚೀನ ವಿಗ್ರಹವನ್ನು ಫೆಬ್ರವರಿ ೧೯೯೮ ರಲ್ಲಿ ಕಳ್ಳತನ ಮಾಡಲಾಗಿತ್ತು. ೨೦೦೩ರಲ್ಲಿ ಲಂಡನ್‌ನ ಭಾರತೀಯ ರಾಯಭಾರಿ ಕಛೇರಿಗೆ ಅದನ್ನು ಒಪ್ಪಿಸಲಾಗಿತ್ತು. ಈಗ ವಿಗ್ರಹವು ಭಾರತಕ್ಕೆ ಹಿಂತಿರುಗಿಸಲಾಗುವುದು. ಕಲ್ಲಿನಿಂದ ನಿರ್ಮಿಸಲಾದ ಈ ವಿಗ್ರಹವು ೪ ಅಡಿ ಉದ್ದ ಇದ್ದು ಅದು ಭಗವಾನ ಶಿವನ ನಟರಾಜನ ರೂಪದಲ್ಲಿದೆ. ಈ ಮೂರ್ತಿ ೮ ರಿಂದ ೧೧ ನೇ ಶತಮಾನದಲ್ಲಿ ರಾಜಸ್ಥಾನದಲ್ಲಿ ರಾಜ್ಯವಾಳುತ್ತಿದ್ದ ಗುರ್ಜರ-ಪ್ರತಿಹಾರ ವಂಶದ ಕಾಲದ ರಾಜಸ್ಥಾನಿ ಕಲೆಯ ದುರ್ಲಭ ಹಾಗೂ ಅದ್ಭೂತ ಮಾದರಿಯಾಗಿದೆ.