೭ ನೇ ತರಗತಿಯ ಪುಸ್ತಕದಿಂದ ಟಿಪ್ಪು ಸುಲ್ತಾನಿನ ಪಾಠವನ್ನು ಕೈಬಿಟ್ಟ ರಾಜ್ಯ ಸರಕಾರ

  • ಕೊರೋನಾದ ಹಿನ್ನೆಲೆಯಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡಲು ಈ ನಿರ್ಣಯ

  • ೬ ನೇ ಹಾಗೂ ೧೦ ನೇ ತರಗತಿಯ ಪಠ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್‌ನ ಇತರ ಪಾಠ ಮುಂದುವರೆಸಿದೆ

ಬೆಂಗಳೂರು – ಕರ್ನಾಟಕ ರಾಜ್ಯದಲ್ಲಿ ಕೊರೋನಾದಿಂದಾಗಿ ಶಾಲೆ ಹಾಗೂ ಮಹಾವಿದ್ಯಾಲಯಗಳು ಕಳೆದ ೩ ತಿಂಗಳಿಗಿಂತಲೂ ಹೆಚ್ಚು ಕಾಲ ಮುಚ್ಚಿವೆ. ಶಾಲೆ ಹಾಗೂ ಮಹಾವಿದ್ಯಾಲಯಗಳು ಪುನಃ ಆರಂಭಿಸುವುದು ಅನಿಶ್ಚಿತವಾಗಿದ್ದು ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ಅವಧಿಯನ್ನು ಕಡಿಮೆ ಮಾಡಲು ವಿಚಾರ ಮಾಡುತ್ತಿದೆ. ಅದಕ್ಕಾಗಿ ಶೇ. ೩೦ ರಷ್ಟು ಪಠ್ಯಕ್ರಮಕ್ಕೆ ಕತ್ತರಿ ಬೀಳಲಿದೆ ಅದರಲ್ಲಿ ಅತ್ಯಂತ ವಿವಾದಾತ್ಮಕವಾಗಿರುವ ಕ್ರೂರಿ ಟಿಪ್ಪು ಸುಲ್ತಾನನ ಬಗೆಗಿನ ಪಾಠವನ್ನು ೭ ನೇ ತರಗತಿಯ ಪುಸ್ತಕದಿಂದ ಕೈಬಿಡಲಾಗಿದೆ. ಅದೇರೀತಿ ೬ ನೇ ಹಾಗೂ ೧೦ ನೇ ತರಗತಿಯ ಪಠ್ಯಕ್ರಮಗಳಲ್ಲಿ ಟಿಪ್ಪು ಸುಲ್ತಾನಿನ ಪಾಠ ಮುಂದುವರೆಸಿದೆ.

ಟಿಪ್ಪು ಸುಲ್ತಾನನ ಪಾಠವನ್ನು ಕೈಬಿಟ್ಟಿರುವ ಬಗ್ಗೆ ವಿರೋಧ ವ್ಯಕ್ತವಾದಾಗ ಅದಕ್ಕೆ ಸರಕಾರವು ಸ್ಪಷ್ಟೀಕರಣ ನೀಡುತ್ತಾ, ‘ನಮಗೆ ೨೨೦ ದಿನದ ಪಠ್ಯಕ್ರಮವನ್ನು ೧೨೦ ದಿನಕ್ಕೆ ಇಳಿಸಲಿಕ್ಕಿದೆ. ಅದಕ್ಕಾಗಿ ಕೆಲವು ಭಾಗಗಳನ್ನು ಕೈ ಬಿಡಲಾಗಿದ್ದು ಅದನ್ನು ತಜ್ಞರು ಸೂಚಿಸಿದ್ದರು. ನಾವು ತಜ್ಞರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿದೆ.
ಕರ್ನಾಟಕದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗ ಸರಕಾರವು ‘ಟಿಪ್ಪು ಸುಲ್ತಾನನ ವಿಷಯವನ್ನು ಪಠ್ಯಪುಸ್ತಕದಿಂದ ತೆಗೆಯಲಾಗುವುದು’, ಎಂದು ಘೋಷಿಸಿ ಅದಕ್ಕಾಗಿ ಒಂದು ಸಮಿತಿಯನ್ನೂ ಸ್ಥಾಪಿಸಿದೆ.