ವಕ್ರದೃಷ್ಟಿಯಿಂದ ನೋಡುವವರಿಗೆ ಭಾರತವು ಪಾಠ ಕಲಿಸಿದೆ ! – ಪ್ರಧಾನಮಂತ್ರಿ ಮೋದಿ

ನವ ದೆಹಲಿ – ನಮ್ಮ ದೇಶವನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ಭಾರತವು ಪಾಠಕಲಿಸಿದೆ. ಭಾರತ ಮಾತೆಯ ಕಡೆ ವಕ್ರದೃಷ್ಟಿಯಿಂದ ನೋಡಿದರೆ, ನಿಮ್ಮ ಕಣ್ಣು ಕೀಳುವ ಶಕ್ತಿ ನಮ್ಮಲ್ಲಿದೆ, ಎಂಬುದು ಭಾರತೀಯ ಸೈನಿಕರು ತೋರಿಸಿಕೊಟ್ಟಿದ್ದಾರೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಕಾಶವಾಣಿಯ ತಮ್ಮ ತಿಂಗಳ ಕಾರ್ಯಕ್ರಮವಾದ ‘ಮನ್ ಕಿ ಬಾತ್’ ನಲ್ಲಿ ಹೇಳಿದ್ದಾರೆ.
ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ, ‘ಹುತಾತ್ಮರಾದ ಸೈನಿಕರ ಬಗ್ಗೆ ಇಡೀ ದೇಶಕ್ಕೆ ದುಃಖವಾಗಿದೆ; ಆದರೆ ಯಾವ ಕುಟುಂಬದ ಸೈನಿಕರು ಹುತಾತ್ಮರಾದರೋ, ಅವರೂ ತಮ್ಮ ಮನೆಯಲ್ಲಿದ್ದ ಇನ್ನೋರ್ವ ಮಗನನ್ನು ಸೇನೆಗೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ. ಹುತಾತ್ಮರ ಕುಟುಂಬದ ಬಗ್ಗೆ ದೇಶಕ್ಕೆ ಅಭಿಮಾನವಿದೆ’ ಎಂದು ಹೇಳಿದರು.

೫೦ ಸಂಕಟ ಬಂದರೂ ಧೃತಿಗೆಡದಿರಿ !

‘ಇಂದು ದೇಶದಲ್ಲಿ ಒಂದೊಂದಾಗಿ ಸಂಕಟಗಳು ಬರುತ್ತಿದೆ. ವರ್ಷದಾದ್ಯಂತ ಒಂದು ಅಥವಾ ೫೦ ಅಡಚಣೆಗಳು ಬರಲಿ, ಅದಕ್ಕಾಗಿ ನೀವು ಧೃತಿಗೆಡುವ ಅವಶ್ಯಕತೆ ಇಲ್ಲ. ಕೆಲವು ದಿನಗಳ ಹಿಂದೆ ಪೂರ್ವ ಕರಾವಳಿಯಲ್ಲಿ ‘ಅಂಫಾನ’ ಹಾಗೂ ಪಶ್ಚಿಮ ಕರಾವಳಿಯಲ್ಲಿ ‘ನಿಸರ್ಗ’ ಚಂಡಮಾರುತ ಬಂದಿತ್ತು. ಕೆಲವು ಕಡೆಗಳಲ್ಲಿ ರೈತರು ಮಿಡತೆಯ ಹಾವಳಿಯಿಂದ ಬಳಲುತ್ತಿದ್ದಾರೆ. ಕೆಲವು ಭಾಗದಲ್ಲಿ ಸಣ್ಣ-ಸಣ್ಣ ಭೂಕಂಪ ಪದೇ ಪದೇ ಬರುತ್ತಿದೆ. ಇವೆಲ್ಲವುದರ ನಡುವೆ ನೆರೆಯ ದೇಶದಿಂದಲೂ ಏನೇನೋ ನಡೆಯುತ್ತಿದೆ. ನೂರಾರು ವರ್ಷಗಳಿಂದ ದೇಶದ ಮೇಲೆ ದಾಳಿಯಾದ ಸಮಯದಲ್ಲಿಯೂ ‘ಭಾರತೀಯ ರಚನೆ, ಸಂಸ್ಕೃತಿ ನಾಶವಾಗುತ್ತದೆ’, ಎಂದು ಅನೇಕರಿಗೆ ಅನಿಸುತ್ತಿತ್ತು; ಆದರೆ ಭಾರತವು ಅದರಿಂದಲೂ ಹೆಚ್ಚು ಭವ್ಯವಾಗಿ ಮುಂದೆ ಬಂದಿತು. ಭಾರತದಲ್ಲಿ ಅನೇಕ ಅಡಚಣೆಗಳು ಬಂದವು, ಆಗ ಹೊಸ ಅಂಶಗಳು ನಿರ್ಮಾಣವಾದವು, ಹೊಸ ಸಾಹಿತ್ಯಗಳು ರಚನೆಯಾದವು, ಹೊಸ ಶೋಧನೆಗಳಾದವು, ಹೊಸ ಸಿದ್ಧಾಂತಗಳು ಸ್ಥಾಪನೆಯಾದವು, ಭಾರತವು ಯಾವಾಗಲೂ ಯಶಸ್ಸಿನ ಮೆಟ್ಟಿಲು ಹತ್ತುತ್ತಿದೆ. ಇದೇ ಭಾವನೆಯಿಂದ ಇಂದೂ ನಮಗೆ ಮುಂದೆ ಹೋಗಲಿಕ್ಕಿದೆ’ ಎಂದು ಹೇಳಿದರು.