ನಾಗರಿಕ ಸಹಕಾರಿ ಬ್ಯಾಂಕ್‌ಗಳು ಇನ್ನು ರಿಝರ್ವ್ ಬ್ಯಾಂಕಿನ ನಿಯಂತ್ರಣದಲ್ಲಿ

ಕೇಂದ್ರ ಸಚಿವ ಸಂಪುಟದ ನಿರ್ಧಾರ

ನವ ದೆಹಲಿ – ಕೇಂದ್ರ ಸಚಿವಸಂಪುಟದ ಸಭೆಯಲ್ಲಿ ನಾಗರಿಕ ಸಹಕಾರಿ ಹಾಗೂ ‘ಮಲ್ಟಿ ಸ್ಟೆಟ್ ಕೊ ಆಪರೇಟಿವ್’ ಈ ಬ್ಯಾಂಕ್‌ಗಳನ್ನು ರಿಝರ್ವ್ ಬ್ಯಾಂಕ್‌ನ ನಿಯಂತ್ರಣದಡಿಯಲ್ಲಿ ತರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಪ್ರಕಾಶ ಜಾವಡೆಕರ ಇವರು ನೀಡಿದರು. ‘ಈ ಬ್ಯಾಂಕಿನಲ್ಲಿರುವ ನಾಗರಿಕರ ಠೇವಣಿಯನ್ನು ಸುರಕ್ಷಿತವಾಗಿಡಲು ಸರಕಾರ ಈ ನಿರ್ಣಯವನ್ನು ತೆಗೆದುಕೊಂಡಿದೆ’, ಎಂದು ಜಾವಡೆಕರ ಇವರು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಹಗರಣ ಹಾಗೂ ಸಾಲದ ಬಾಧೆಯಿಂದಾಗಿ ಅನೇಕ ಬ್ಯಾಂಕ್‌ಗಳು ಮುಳುಗಯಾಗಿದ್ದರಿಂದ ಠೇವಣಿದಾರರಿಗೆ ಅಡಚಣೆ ನಿರ್ಮಾಣವಾಗಿತ್ತು. ಆದ್ದರಿಂದ ಸರಕಾರಕ್ಕೆ ಈ ನಿರ್ಣಯ ತೆಗೆದುಕೊಳ್ಳಬೇಕಾಯಿತು.

ಜಾವಡೆಕರ ತಮ್ಮ ಮಾತನ್ನು ಮುಂದುವರೆಸುತ್ತ, ‘೧ ಸಾವಿರದ ೪೮೨ ನಾಗರಿಕ ಸಹಕಾರ ಬ್ಯಾಂಕ್ ಹಾಗೂ ೫೮ ‘ಮಲ್ಟಿ ಸ್ಟೆಟ್ ಕೊ-ಆಪರೇಟಿವ’ ಬ್ಯಾಂಕ್ ಇನ್ನು ರಿಝರ್ವ್ ಬ್ಯಾಂಕಿನ ಮೇಲ್ವಿಚಾರಣೆಯಲ್ಲಿರುವುದು. ‘ಶೆಡ್ಯುಲ್’ ಬ್ಯಾಂಕ್‌ನಂತೆಯೇ ಸಹಕಾರಿ ಬ್ಯಾಂಕ್‌ಗಾಗಿ ರಿಝರ್ವ್ ಬ್ಯಾಂಕ್‌ಗೆ ಅದೇ ಅಧೀಕಾರವನ್ನು ಉಪಯೋಗಿಸಲಾಗುವುದು. ಈ ಮೂಲಕ ಈ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ೮ ಕೋಟಿ ೬೦ ಲಕ್ಷ ಠೇವಣಿದಾರರಿಗೆ ಅವರ ಠೇವಣಿಯ ಮೇಲೆ ಇರುವ ೪.೮೪ ಲಕ್ಷಕೋಟಿ ಸುರಕ್ಷಿತವಾಗಿಡಲಾಗುವುದು ಎಂದು ಮುಚ್ಚಳಿಕೆ ನೀಡಲಾಗುವುದು’ ಎಂದು ಹೇಳಿದೆ.