ಗುಜರಾತ್ ನ ಭಾಜಪಾದ ಮಾಜಿ ಶಾಸಕರಿಂದ ಮೊರಾರಿ ಬಾಪೂರವರ ಮೇಲೆ ಹಲ್ಲೆ ಮಾಡುವ ಯತ್ನ

ಭಗವಾನ ಶ್ರೀಕೃಷ್ಣ ಹಾಗೂ ಬಲರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಪ್ರಕರಣ

ದ್ವಾರಕಾ (ಗುಜರತ) – ತಥಾಕಥಿತ ಪ್ರವಚನಕಾರ ಮೊರಾರಿ ಬಾಪೂ ಇವರು ಭಗವಾನ ಶ್ರೀಕೃಷ್ಣ ಹಾಗೂ ಬಲರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಪ್ರಕರಣದಲ್ಲಿ ಭಾಜಪದ ಮಾಜಿ ಶಾಸಕ ಪಬುಭಾ ಮಾಣೆಕ ಇವರು ಅಲ್ಲಿ ನಡೆಯುತ್ತಿರುವ ಪತ್ರಕರ್ತರ ಪರಿಷತ್ತಿನ ಸಮಯದಲ್ಲಿ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನಿಸಿದ್ದಾರೆ. ಇದರ ‘ವಿಡಿಯೋ’ ಒಂದು ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಪ್ರಸಾರವಾಗಿದೆ. ಈ ಸಮಯದಲ್ಲಿ ಭಾಜಪದ ಶಾಸಕ ಪೂನಮ ಮಾಡಮ್ ಇವರೂ ಉಪಸ್ಥಿತರಿದ್ದರು.
ಈ ಘಟನೆಯ ಬಗ್ಗೆ ಮಾಣೆಕಯವರು, ‘ನಾನು ಮೊರಾರಿ ಬಾಪು ಅವರಲ್ಲಿ ಇಷ್ಟೇ ಕೇಳಲು ಬಯಸುತ್ತೇನೆಂದರೆ, ಅವರು ಇಂತಹ ಆಕ್ಷೆಪಾರ್ಹ ಹೇಳಿಕೆಯನ್ನು ಏಕೆ ನೀಡಿದ್ದಾರೆ ? ಹಾಗೂ ಅವರಿಗೆ ಈ ವಿಷಯದ ಮಾಹಿತಿ ಎಲ್ಲಿಂದ ಲಭ್ಯವಾಗಿದೆ ? ನಾನು ಅವರ ಬಳಿ ಹೋಗುವಷ್ಟರಲ್ಲೇ ಅವರ ಬೆಂಬಲಿಗರು ನನ್ನನ್ನು ‘ನಾನು ಅವರ ಮೇಲೆ ಹಲ್ಲೆ ಮಾಡುವೆನು’, ಎಂದು ತಿಳಿದು ನನ್ನನ್ನು ಹಿಡಿದರು’, ಎಂದು ಹೇಳಿದ್ದಾರೆ.