ಪುರಿ (ಒರಿಸ್ಸಾ) – ಕೊರೋನಾ ಸಂಕಟದಿಂದಾಗಿ ಸರ್ವೋಚ್ಚ ನ್ಯಾಯಾಲಯವು ಭಗವಾನ ಜಗನ್ನಾಥ ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದರಿಂದ ಅದರ ವಿರುದ್ಧ ಇಲ್ಲಿಯ ‘ಶ್ರೀಜಗನ್ನಾಥ ಸೇನಾ’ ಹಾಗೂ ‘ಶ್ರೀಕ್ಷೇತ್ರ ಸುರಕ್ಷಾ ವಾಹಿನಿ’ ಈ ಸಂಘನಟೆಗಳು ‘ಪುರಿ ಬಂದ್’ಗೆ ಕರೆ ನೀಡಿದ್ದರು. ಅದಕ್ಕನುಸಾರ ಬೆಳಿಗ್ಗೆ ೬ ಗಂಟೆಯಿಂದ ೧೨ ಗಂಟೆಗಳ ವರೆಗೆ ಪಟ್ಟಣಗಳು ಮುಚ್ಚಿದ್ದವು.
‘ರಥಯಾತ್ರೆ ಹೊರಡದಿದ್ದರೆ, ಪರಂಪರೆಯ ಪಾಲನೆ ಆಗುವುದು ಹೇಗೆ ?’, ಇದರ ಬಗ್ಗೆ ‘ಶ್ರೀಜಗನ್ನಾಥ ದೇವಸ್ಥಾನ ಸಮತಿ’ಯ ಸದಸ್ಯರು ಪುರಿ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಮಾರ್ಗದರ್ಶನ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.