ಭಾರತ-ಚೀನಾ ಸಂಘರ್ಷದಿಂದಾಗಿ ರಾಮಮಂದಿರದ ನಿರ್ಮಾಣಕಾರ್ಯ ಸ್ಥಗಿತ

  • ಒಂದೆಡೆ ಭಗವಾನ ಶ್ರೀರಾಮನು ಚೀನಾದ ಡ್ರಾಗಾನನನ್ನು ಹೊಡೆಯುತ್ತಿರುವ ಚಿತ್ರ ಟಿಬೇಟ್‌ನಲ್ಲಿ ಜನಪ್ರಿಯವಾಗುತ್ತಿದೆ ಮತ್ತು ಅದು ಎಲ್ಲಡೆ ಪ್ರಸಾರ ಮಾಡಲಾಗುತ್ತಿದ್ದರೆ ಇನ್ನೊಂದೆಡೆ ಭಗವಾನ ಶ್ರೀರಾಮನ ಭೂಮಿಯಾಗಿರುವ ಭಾರತದಲ್ಲಿ ಮಾತ್ರ ರಾಮಮಂದಿರ ನಿರ್ಮಾಣ ಕಾರ್ಯವನ್ನು ನಿಲ್ಲಿಸಲಾಗುತ್ತಿದೆ.

  • ಭಾರತ-ಚೀನಾದ ಸಂಘರ್ಷದಿಂದಾಗಿ ರಾಮಮಂದಿರದ ನಿರ್ಮಾಣಕಾರ್ಯ ನಿಲ್ಲಿಸುವುದು ಯೋಗ್ಯವಾಗಿದೆಯೇ ಅಥವಾ ಚೀನಾಗೆ ಪಾಠಕಲಿಸುವುದು ಯೋಗ್ಯವಾಗಿದೆಯೇ ?


ಅಯೋಧ್ಯೆ(ಉತ್ತರಪ್ರದೇಶ)- ಭಾರತ ಹಾಗೂ ಚೀನಾ ಸೈನಿಕರ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ ರಾಮಮಂದಿರದ ನಿರ್ಮಾಣಕಾರ್ಯವನ್ನು ತುರ್ತಾಗಿ ನಿಲ್ಲಿಸಲಾಯಿತು ಎಂದು ಘೋಷಿಸಿದೆ. ‘ಟ್ರಸ್ಟ್’ನ ಸದಸ್ಯ ಶ್ರೀ.ಅನಿಲ ಮಿಶ್ರಾರವರು, ‘ಭಾರತ-ಚೀನಾದ ಗಡಿಯಲ್ಲಿನ ಪರಿಸ್ಥಿತಿ ಗಂಭೀರವಾಗಿದೆ ಹಾಗೂ ದೇಶದ ರಕ್ಷಣೆ ಮಾಡುವುದು ಎಲ್ಲಕ್ಕಿಂತ ಮಹತ್ವದ್ದಾಗಿದೆ. ದೇವಸ್ಥಾನದ ನಿರ್ಮಾಣಕಾರ್ಯ ಪುನಃ ಆರಂಭಿಸುವ ನಿರ್ಣಯವನ್ನು ದೇಶದ ಪರಿಸ್ಥಿತಿಯನುಸಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.