ಕಳೆದ ೨೪ ಗಂಟೆಗಳಲ್ಲಿ ಕಾಶ್ಮೀರದಲ್ಲಿ ೯ ಉಗ್ರರ ಹತ್ಯೆ

ಶೋಪಿಯಾಂ (ಜಮ್ಮು – ಕಾಶ್ಮೀರ) – ಜೂನ್ ೮ ರ ಬೆಳಿಗ್ಗೆ ಇಲ್ಲಿಯ ಪಿಂಜೋರಾ ಪ್ರದೇಶದಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹತ್ಯೆ ಮಾಡಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಭದ್ರತಾ ಪಡೆಗಳು ಒಟ್ಟು ೯ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಜೂನ್ ೭ ರಂದು ಶೋಪಿಯಾನ್‌ನಲ್ಲೇ ರೆಬನ್‌ದಲ್ಲಿ ೫ ಭಯೋತ್ಪಾದಕರ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಪುಲ್ವಾಮಾ ಮತ್ತು ಕುಲ್ಗಮ್ ಪ್ರದೇಶದಲ್ಲಿ ಹಿಜಬುಲ್ ಮುಜಾಹಿದೀನ್ ನ ಕಮಾಂಡರ ಫಾರುಕ ಅಹಮದ ಭಟ್ ಅಲಿಯಾಸ್ ನಾಲಿ ಹಾಡಿಯನನ್ನು ಹೊಡೆದುರುಳಿಸಲಾಗಿತ್ತು.