ದೆಹಲಿಯ ಮರಕಝನ ಕಾರ್ಯಕ್ರಮವನ್ನು ಆ ಸಮಯದಲ್ಲೇ ನಿಲ್ಲಿಸುತ್ತಿದ್ದರೆ, ದೇಶದಲ್ಲಿ ಕರೋನದ ಪ್ರಮಾಣ ಹೆಚ್ಚಾಗುತ್ತಿರಲಿಲ್ಲ! – ಅಮಿತ್ ಷಾ ಸ್ವೀಕೃತಿ

ದೇಶದಲ್ಲಿ ಕರೋನಾ ಹಾವಳಿಗೆ ತಬ್ಲೀಘಿ ಸಮುದಾಯವನ್ನು ಹೊಣೆಯನ್ನಾಗಿಸಿ ಕೇಂದ್ರ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಜನರಿಗೆ ಅನಿಸುತ್ತದೆ !

ನವ ದೆಹಲಿ : ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಘಿ ಜಮಾತ್ ಮರಕಝನಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತವೆ. ಅವು ಸಾರ್ವಜನಿಕ ಕಾರ್ಯಕ್ರಮವಾಗಿರದೇ, ಅವು ಮರಕಝದೊಳಗೆ ನಡೆಯುತ್ತವೆ. ಆದ್ದರಿಂದ ನಾವು ಈ ಕಾರ್ಯಕ್ರಮಗಳನ್ನು ಆ ಸಮಯದಲ್ಲೇ ನಿಲ್ಲಿಸುತ್ತಿದ್ದರೆ ಹಾಗೂ ಅಲ್ಲಿನ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದರೆ, ದೇಶದಲ್ಲಿ ಕರೋನಾದ ಹಾವಳಿ ಹೆಚ್ಚಾಗಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರಲಿಲ್ಲ’ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಒಪ್ಪಿಕೊಂಡರು. ಮೇ ೩೦ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವಾರ್ಷಿಕೋತ್ಸವ ನಡೆಯಿತು. ಅದರ ಬಗ್ಗೆ ಆಯೋಜಿಸಲಾಗಿದ್ದ ಒಂದು ಪತ್ರಿಕಾಗೋಷ್ಠಿಯ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ತಬಲೀಗಿಯವರಿಂದಾಗಿಯೇ ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆಯನ್ನು ಶೇಕಡಾ ೩೦ ರಷ್ಟು ಹೆಚ್ಚಾಗಿತ್ತು.