ದೇಶದಲ್ಲಿ ೨೪ ಗಂಟೆಗಳಲ್ಲಿ ೭,೯೬೪ ಹೊಸ ಕರೋನಾ ರೋಗಿಗಳು ೨೬೫ ಸಾವು

೨೪ ಗಂಟೆಗಳಲ್ಲಿ ಗರಿಷ್ಠ ಹೆಚ್ಚಳ

ನವದೆಹಲಿ: ಕಳೆದ ವಾರದಲ್ಲಿ ೬ ಸಾವಿರದಂತೆ ಹೆಚ್ಚಾಗುತ್ತಿದ್ದ ಕೊರೊನಾ ಪೀಡಿತ ರೋಗಿಗಳ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ೧,೦೦೦ ಹೆಚ್ಚಾಗಿದೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೭,೯೬೪ ಹೊಸ ರೋಗಿಗಳು ಪತ್ತೆಯಾಗಿವೆ. ಅದರಿಂದ ದೇಶದ ಒಟ್ಟು ಕರೋನಾ ರೋಗಿಗಳ ಸಂಖ್ಯೆ ೧ ಲಕ್ಷದ ೭೩ ಸಾವಿರ ೭೬೩ ಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ೨೬೫ ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು ೪,೯೭೧ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೊರೋನಾ ರೋಗಿಗಳ ಮೃತ್ಯುವಿನ ದರ ಚೀನಾಗಿಂತಲೂ ಹೆಚ್ಚಾಗಿದೆ. ಚೀನಾದಲ್ಲಿ ಈವರೆಗೆ ೪,೬೩೮ ರೋಗಿಗಳು ಸಾವನ್ನಪ್ಪಿದ್ದಾರೆ. ಈವರೆಗೆ ಭಾರತದಲ್ಲಿ ೮೨,೩೭೦ ಜನರು ಕರೋನಾದಿಂದ ಗುಣಮುಖರಾಗಿದ್ದಾರೆ.