‘ಸಾಮಾಜಿಕ ಅಂತರ’ದ ನಿಯಮಗಳನ್ನು ಪಾಲಿಸಿ ಮದ್ಯದ ಅಂಗಡಿಗಳನ್ನು ತೆರೆಯಬಹುದಾದರೆ, ಕರ್ನಾಟಕ ಸರಕಾರದ ನಿರ್ಣಯದಂತೆ ಇತರ ರಾಜ್ಯಗಳೂ ದೇವಸ್ಥಾನಗಳನ್ನೂ ತೆರೆಯಬೇಕು ! – ಶ್ರೀ. ಗುರುಪ್ರಸಾದ ಗೌಡ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಸಂಚಾರ ನಿಷೇಧದಲ್ಲಿ ಮದ್ಯದಂಗಡಿಗಳನ್ನು ತೆರೆಯುವುದಕ್ಕಿಂತ ಜನರ ನಂಬಿಕೆಯಾಗಿದ್ದ ಚರ್ಚುಗಳನ್ನು ತೆರೆಯುವುದು ಮುಖ್ಯ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹಾಗೆ ಮಾಡುವಂತೆ ಆಡಳಿತಕ್ಕೂ ಸೂಚನೆ ನೀಡಿದ್ದರು. ಸಂಕಟಕಾಲದಲ್ಲಿ ‘ಶ್ರದ್ಧೆಯೇ’ ಸಮಾಜದ ಆಧಾರಸ್ತಂಭವಾಗಿರುತ್ತದೆ. ಇಂದು ಸಮಾಜಕ್ಕೆ ಶ್ರದ್ಧೆಯ ಆಧಾರ ಬೇಕೇ ಹೊರತು ಮದ್ಯದ ಆಧಾರವಲ್ಲ. ಭಾರತದಾದ್ಯಂತದ ಮದ್ಯದಂಗಡಿಗಳನ್ನು ‘ಸಾಮಾಜಿಕ ಅಂತರ’ ನಿಯಮಗಳನ್ನು ಅನುಸರಿಸಿ ತೆರೆಯಲು ಸಾಧ್ಯವಾದರೆ, ಅದೇ ರೀತಿಯಲ್ಲಿ ಎಲ್ಲಾ ನಿಯಮಗಳನ್ನು ಅನುಸರಿಸಿ ಕರ್ನಾಟಕ ಸರಕಾರ ದೇವಸ್ಥಾನ ತೆರೆಯಲು ನಿರ್ಧರಿಸಿದಂತೆ ಇತರ ರಾಜ್ಯಗಳೂ ಸಹ ಇದನ್ನು ಅನ್ವಯಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಒತ್ತಾಯಿಸಿದ್ದಾರೆ. ‘ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಹಾರಾಷ್ಟ್ರದಲ್ಲಿ ದೇವಾಲಯದ ಕಾರ್ಯದರ್ಶಿಗಳ ಕ್ರಿಯಾಶೀಲ ಸಂಘಟನೆಯನ್ನು ರಚಿಸಬೇಕೆಂದು ಮೇ ೨೯ ರಂದು ‘ಆನ್‌ಲೈನ್ ಚರ್ಚಾಕೂಟ’ವನ್ನು ಆಯೋಜಿಸಲಾಗಿತ್ತು. ಈ ಚರ್ಚಾಕೂಟದಲ್ಲಿ ೨೨೫ ದೇವಸ್ಥಾನದ ಕಾರ್ಯದರ್ಶಿಗಳು, ದೇವಸ್ಥಾನದ ಅರ್ಚಕರು, ಮಠಾಧೀಶರು, ಧರ್ಮಪ್ರೇಮಿಗಳು, ಹಿಂದುತ್ವನಿಷ್ಠ ವಕೀಲರು ಮತ್ತು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮಯದಲ್ಲಿ ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಠರಾವನ್ನು ನಿರ್ಧರಿಸಲಾಯಿತು ಹಾಗೂ ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ, ಅದೇರೀತಿ ಎಲ್ಲಾ ದೇವಸ್ಥಾನಗಳ ಪರವಾಗಿ ಇದರ ಬಗ್ಗೆ ಸರಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಿದೆ ಎಂಬ ಮಾಹಿತಿಯನ್ನು ಶ್ರೀ. ಗುರುಪ್ರಸಾದ ಗೌಡ ಇವರು ತಿಳಿಸಿದ್ದಾರೆ.
ಭಾರತದ ಸಂವಿಧಾನವು ‘ಜಾತ್ಯತೀತ’ವಾಗಿದ್ದರೂ, ಸರರ್ಕಾರ ಕೇವಲ ಹಿಂದೂ ದೇವಸ್ಥಾನಗಳ ನಿರ್ವಹಣೆಯನ್ನು ಹೇಗೆ ನೋಡಿಕೊಳ್ಳುತ್ತದೆ ?’, ಕೇವಲ ಹಿಂದೂ ದೇವಸ್ಥಾನಗಳನ್ನು ಸರಕಾರಿಕರಣ ಮಾಡುವ ಸರ್ಕಾರವು ಮಸೀದಿಗಳು, ಚರ್ಚುಗಳು ಇತ್ಯಾದಿಗಳನ್ನು ಸರಕಾರಿಕರಣ ಮಾಡಲು ಏಕೆ ಹಿಂಜರಿಯುತ್ತದೆ ? ಸರಕಾರಿಕರಣಗೊಂಡಿರುವ ದೇವಸ್ಥಾನಗಳ ಸ್ಥಿತಿ ಭೀಕರವಾಗಿದೆ. ಅನೇಕ ದೇವಸ್ಥಾನಗಳ ಸರಕಾರಿ ಸಮಿತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ; ಸರರ್ಕಾರವು ದೇವಸ್ಥಾನಗಳ ಸಂಪ್ರದಾಯಗಳು, ಧಾರ್ಮಿಕ ಆಚರಣೆಗಳು, ಪುರೋಹಿತರು ಮತ್ತು ಇತರ ಪ್ರಾಚೀನ ವ್ಯವಸ್ಥೆಗಳಲ್ಲಿ ಮನಬಂದಂತೆ ಹಸ್ತಕ್ಷೇಪ ಮಾಡುತ್ತಿದೆ. ದೇವಸ್ಥಾನಗಳ ಮೇಲಿನ ಇಂತಹ ಎಲ್ಲಾ ಆಘಾತಗಳ ವಿರುದ್ಧ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ‘ರಾಷ್ಟ್ರೀಯ ಮಂದಿರ-ಸಂಸ್ಕೃತಿ ರಕ್ಷಾ ಅಭಿಯಾನ’ವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ಅಂಗವಾಗಿ ಮಹಾರಾಷ್ಟ್ರದಲ್ಲಿ ದೇವಸ್ಥಾನದ ಕಾರ್ಯದರ್ಶಿಗಳ ‘ಆನ್‌ಲೈನ್’ ಚರ್ಚಾಕೂಟ ನೆರವೇರಿತು. ಈ ವೇಳೆ ‘ದೊಡ್ಡ ದೇವಸ್ಥಾನಗಳು ತನ್ನ ಪ್ರದೇಶದ ಸಣ್ಣ ದೇವಸ್ಥಾನಗಳಿಗೆ ಸಹಾಯ ಮಾಡಲು ಅವುಗಳನ್ನು ದತ್ತು ಪಡೆಯಬೇಕು, ‘ದೇವಸ್ಥಾನಗಳಲ್ಲಿ ಭಕ್ತರಿಗೆ ಧರ್ಮಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕು’, ‘ದೇವಸ್ಥಾನದ ಕಾರ್ಯದರ್ಶಿಗಳನ್ನು ಸಂಘಟಿಸಲು ನಿಯಮಿತವಾಗಿ ಸಭೆಗಳನ್ನು ನಡೆಸಬೇಕು’, ಎಂಬ ಠರಾವನ್ನು ದೇವಸ್ಥಾನದ ಕಾರ್ಯದರ್ಶಿಗಳು ಸರ್ವಾನುಮತದಿಂದ ಒಪ್ಪಿಕೊಂಡರು, ಎಂದೂ ಶ್ರೀ. ಗೌಡ ಇವರು ಹೇಳಿದ್ದಾರೆ.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಈ ಚರ್ಚಾಕೂಟದಲ್ಲಿ ಮಾತನಾಡುತ್ತಾ, ಭಕ್ತರು ದೇವಸ್ಥಾನಕ್ಕೆ ಅರ್ಪಿಸಿದ ದೇವನಿಧಿಯನ್ನು ದೇವಸ್ಥಾನದ ವಿವಿಧ ಧಾರ್ಮಿಕ ಕೃತಿಗಳಿಗೆ, ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ, ಸನಾತನ ಧರ್ಮದ ಪ್ರಸಾರ ಮತ್ತು ಕೇವಲ ಸತ್ಕಾರ್ಯಗಳಿಗಾಗಿ ಬಳಕೆಯಾಗಬೇಕು. ಭ್ರಷ್ಟಾಚಾರ ಮತ್ತು ನಿಷ್ಕ್ರಿಯತೆಯಿಂದಾಗಿ ವಿವಿಧ ಸರ್ಕಾರಿ ಸಂಸ್ಥೆಗಳು ಖಾಸಗೀಕರಣಗೊಳ್ಳುತ್ತಿದ್ದರೆ, ದೇವಾಲಯಗಳನ್ನು ಮಾತ್ರ ಸರಕಾರಿಕರಣಗೊಳಿಸಲಾಗುತ್ತಿದೆ. ದೇವಸ್ಥಾನದ ಸರಕಾರಿಕರಣಕ್ಕಾಗಿ ಇನ್ನೂ ಎಷ್ಟು ದೇವಸ್ಥಾನಗಳನ್ನು ಬಲಿಪಶು ಮಾಡಲಾಗುವುದು ?’, ಎಂದೂ ಶ್ರೀ. ರಾಜಹಂಸ ಇವರು ಈ ವೇಳೆ ಪ್ರಶ್ನಿಸಿದರು. ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ ಇವರು ಈ ವೇಳೆ ಮಾತನಾಡುತ್ತಾ, ಸರಕಾರ ಒಂದೆಡೆ ಅಧಿಸೂಚನೆ ಹೊರಡಿಸುವ ಮೂಲಕ ಯಾವುದೇ ದೇವಸ್ಥಾನಗಳನ್ನು ಯಾವ ಸಮಯದಲ್ಲಾದರೂ ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳಬಹುದು. ಆದ್ದರಿಂದ ಎಲ್ಲಾ ದೇವಸ್ಥಾನಗಳ ಮೇಲೆ ಇದು ತೂಗುಕತ್ತಿಯಂತಿದೆ. ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ, ಭೂಹಗರಣಗಳು, ಆಭರಣ ಕಳ್ಳತನ ಮತ್ತು ಇತರ ಹಲವಾರು ಗಂಭೀರ ವಿಷಯಗಳನ್ನು ಮಾಹಿತಿ ಹಕ್ಕು ಅಧಿಕಾರದ ಮೂಲಕ ಬಹಿರಂಗಪಡಿಸಿದೆ. ಇವೆಲ್ಲವನ್ನೂ ತಡೆಯಲು ಹಿಂದೂಗಳ ಬಲವಾದ ಸಂಘಟನೆ ಆಗಬೇಕು. ಈ ಸಮಯದಲ್ಲಿ ಅನೇಕ ದೇವಸ್ಥಾನಗಳ ಕಾರ್ಯದರ್ಶಿಗಳು ಮತ್ತು ಧರ್ಮಪ್ರೇಮಿ ವಕೀಲರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಚರ್ಚಾಕೂಟದ ಕೊನೆಯಲ್ಲಿ, ಎಲ್ಲರೂ ‘ಹರ್ ಹರ್ ಮಹಾದೇವ’ ಈ ಜಯಘೋಷದೊಂದಿಗೆ ಠರಾವನ್ನು ಒಮ್ಮತದಿಂದ ಅಂಗೀಕರಿಸಲಾಯಿತು, ಎಂಬ ಮಾಹಿತಿಯನ್ನು ಶ್ರೀ. ಗುರುಪ್ರಸಾದ ಗೌಡ ಇವರು ಮಾಹಿತಿ ನೀಡಿದ್ದಾರೆ.