ಶೆಮರೂ ಸಂಸ್ಥೆಯಿಂದ ಕ್ಷಮೆಯಾಚನೆ
-
ಹಿಂದೂ ಧರ್ಮವನ್ನು ಅವಮಾನಿಸುವ ಹಿಂದೂಗಳು ಹಿಂದೂ ಧರ್ಮದ ನಿಜವಾದ ಶತ್ರುಗಳಾಗಿದ್ದಾರೆ. ಆದ್ದರಿಂದ ಹಿಂದೂಗಳು ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸಬೇಕೇ ? ಎಂಬುದನ್ನು ನಿರ್ಧರಿಸಿ
-
ಹಿಂದೂಗಳೇ, ಯಾರೂ ನಿಮ್ಮ ಶ್ರದ್ಧಾಸ್ಥಾನದ ಕಡೆ ವಕ್ರ ದೃಷ್ಟಿಯಿಂದ ನೋಡಬಾರದು, ಎನ್ನುವಂತೆ ನಿಮ್ಮ ಪ್ರಭಾವವನ್ನು ನಿರ್ಮಿಸಿ !
-
ಹಿಂದೂಗಳೇ, ಕೇವಲ ಪೊಲೀಸರಿಗೆ ದೂರು ನೀಡಿ ಸುಮ್ಮನಾಗದಿರಿ, ಅಂತಹವರಿಗೆ ಕಠಿಣ ಶಿಕ್ಷೆಯಾಗುವವರೆಗೂ ಬೆಂಬತ್ತುವಿಕೆ ಮಾಡಿ !
ಮುಂಬೈ: ಏಕಪಾತ್ರಾಭಿನಯ ಹಾಸ್ಯ ಕಾರ್ಯಕ್ರಮ ಮಾಡುವ ಸುರಲೀನ ಕೌರ್ ಗ್ರೋವರ ಇವರು ‘ಇಸ್ಕಾನ್’ (ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್) ಈ ಸಂಘಟನೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಕ್ಕಾಗಿ ಅವರ ಹಾಗೂ ‘ಶೆಮಾರು’ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಸುರಲೀನ್ ಕೌರ ಇವರು ‘ವೀಡಿಯೊ’ವೊಂದರಲ್ಲಿ ‘ಇಸ್ಕಾನ್’, ಋಷಿಮುನಿಗಳು ಹಾಗೂ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತ. ಅವರ ಅಪಹಾಸ್ಯವನ್ನು ಮಾಡಿದ್ದಾರೆ. ಅವರ ಈ ‘ವಿಡಿಯೋ’ ‘ಶೆಮಾರು’ ಈ ಸಂಸ್ಥೆಯು ಪ್ರಸಾರ ಮಾಡಿದೆ. ‘ಈ ವಿಡಿಯೋ’ದ ವಿರುದ್ಧ ನೀಡಲಾದ ದೂರಿನ ನಂತರ ಅದನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಲಾಗಿದೆ. ಇದಲ್ಲದೆ, ‘ಶೆಮರೂ’ ಸಂಸ್ಥೆಯು ಕ್ಷಮೆಯಾಚಿಸಿದೆ.
ಏನ್ನನು ಅವಮಾನಿಸಿದ್ದಾರೆ ?
ಈ ಬಗ್ಗೆ ಮಾಹಿತಿ ನೀಡಿದ ‘ಇಸ್ಕಾನ್’ನ ವಕ್ತಾರರಾದ ರಾಧಾರಮಣ ದಾಸ್, “ಈ ‘ವೀಡಿಯೊ’ದಲ್ಲಿ ಸುರಲೀನ್ ಇವರು ‘ನಿಜವಾಗಿಯೂ ನಾವೆಲ್ಲರೂ ‘ಇಸ್ಕಾನ್’ದವರಾಗಿದ್ದೇವೆ; ಆದರೆ ಒಳಗೆ ಮಾತ್ರ ನಾವೆಲ್ಲರೂ ಹರಾಮಿ ‘ಪಾರ್ನ್’ ಆಗಿದ್ದೇವೆ. ಧನ್ಯರಾಗಿದ್ದಾರೆ ನಮ್ಮ ಋಷಿಮುನಿಗಳು ಅವರು ಸ್ವಲ್ಪ ಸಂಸ್ಕೃತವನ್ನು ಉಪಯೋಗಿಸಿ ಅವರ ದೊಡ್ಡ ದೊಡ್ಡ ಹಗರಣಗಳನ್ನು ಮುಚ್ಚಿಟ್ಟಿದ್ದಾರೆ, ಉದಾ. ಕಾಮಸೂತ್ರ’, ಹೀಗೆ ಅವಮಾನಕರ ಹೇಳಿಕೆಯನ್ನು ನೀಡಿದಿದ್ದಾರೆ. ಈ ಮೂಲಕ ಅವರು ಸನಾತನ ಧರ್ಮದ ಅನುಯಾಯಿ, ಹಿಂದೂ ಹಾಗೂ ‘ಇಸ್ಕಾನ್’ಗೆ ಸಂಬಂಧಪಟ್ಟವರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ”, ಎಂದಿದ್ದಾರೆ.