ಸಂತ್ರಸ್ತ ಯುವತಿಯ ಹೆಸರನ್ನು ಮುಸ್ಲಿಂ ಹೆಸರಿಗೆ ಬದಲಾಯಿಸಿ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿದ !

ದೌಸಾ (ರಾಜಸ್ಥಾನ) – ಇಲ್ಲಿ ಹಿಂದೂ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ 3 ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ. ಆರೋಪಿಗಳು ಸಂತ್ರಸ್ತ ಯುವತಿಯ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿ, ಅದರಲ್ಲಿ ಹಿಂದೂ ಯುವತಿಯ ಹೆಸರನ್ನು ಬದಲಾಯಿಸಿ ಮುಸ್ಕಾನ್ ಖಾನ್ ಎಂದು ಮಾಡಿದ್ದರು. ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿದ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ.
1. ಆರೋಪಿ ವಕೀಲ್ ಖಾನ್ ಸಂತ್ರಸ್ತ ಯುವತಿಯನ್ನು ಮೊಬೈಲ್ ದುರಸ್ತಿ ನೆಪದಲ್ಲಿ ಲಾಲಸೋಟ್ ಗೆ ಕರೆಸಿಕೊಂಡನು. ಆರೋಪಿಯು ಆಕೆಗೆ ಅಮಲು ಪದಾರ್ಥ ಬೆರೆಸಿದ ಪಾನೀಯ ಕುಡಿಸಿ ಮೂರ್ಛೆ ಗೊಳಿಸಿ ಅದೇ ಸ್ಥಿತಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದನು.
2. ಆರೋಪಿಯು ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿ, ನಂತರ ಆ ವಿಡಿಯೋವನ್ನು ಹರಡುವುದಾಗಿ ಬೆದರಿಕೆ ಹಾಕಿ ಪದೇ ಪದೇ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದನು.
3. ಆರೋಪಿ ವಕೀಲ್ ಖಾನ್ ತನ್ನ ಪರಿಚಯದ ರಾಹಿಲ್ ಮತ್ತು ನಯಾಬ್ ಖಾನ್ ಅವರಿಗೂ ಅತ್ಯಾಚಾರ ಎಸಗುವಂತೆ ಹೇಳಿದನು. ಅದರಂತೆ ಅವರಿಬ್ಬರೂ ಅತ್ಯಾಚಾರ ಎಸಗಿದರು.
4. ಪೊಲೀಸರು ಈ ಪ್ರಕರಣದಲ್ಲಿ ಆರೋಪಿಗಳಾದ ವಕೀಲ್ ಖಾನ್, ರಾಹಿಲ್ ಮತ್ತು ನಯಾಬ್ ಖಾನ್ ಅವರನ್ನು ಬಂಧಿಸಿದ್ದಾರೆ.
5. ಪೊಲೀಸರು ಸಂತ್ರಸ್ತ ಹಿಂದೂ ಯುವತಿಯ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿದ ಪ್ರಕರಣದಲ್ಲಿ ಬೌಲಿ ನಿವಾಸಿ ನದೀಮ್ ಅನ್ಸಾರಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ