ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಅವರ ಹೇಳಿಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನನ್ನದೇನೂ ಪ್ರೇಮ ವಿವಾಹಕ್ಕೆ ವಿರೋಧವಿಲ್ಲ. ಯಾವಾಗ ಪೋಷಕರು ಮಕ್ಕಳ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲವೋ, ಆಗ ಜೋಡಿಗಳು ಓಡಿಹೋಗಿ ಮದುವೆಯಾಗುತ್ತಾರೆ. ಇದರಿಂದಾಗಿ ಹಲವು ಬಾರಿ ಹುಡುಗಿಯರು ಶಿಕ್ಷಣ ಪಡೆಯುತ್ತಿರುವಾಗಲೇ ಗರ್ಭಿಣಿಯಾಗಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಅಂತಹ ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ ಹಲವು ಬಾರಿ ಸರಕಾರದ ಮೇಲೆ ಬರುತ್ತದೆ. ಇವು ನಿಮ್ಮ ಪರಾಕ್ರಮಗಳಾಗಿವೆ. ಇಂತಹ ಪರಾಕ್ರಮಗಳನ್ನು ಮಾಡಬೇಡಿ ಎಂದು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಕರೆ ನೀಡಿದರು. ಅವರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದು, ಇದರ ಮೇಲೆ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ರಾಜ್ಯಪಾಲೆ ಪಟೇಲ್ ಅವರು ಮುಂದೆ ಮಾತನಾಡುತ್ತಾ, ನನ್ನ ಮಗ ಬೆಂಗಳೂರಿಗೆ ಶಿಕ್ಷಣ ಪಡೆಯಲು ಹೋಗಿದ್ದನು. ನಾನು ಅವನಿಗೆ ಹೇಳಿದ್ದೆ, ನಿನಗೆ ಯಾರಾದರೂ ಹುಡುಗಿ ಇಷ್ಟವಾದರೆ ನನಗೆ ತಿಳಿಸು, ನಾನೇ ಮದುವೆ ಮಾಡಿಸುತ್ತೇನೆ, ಆದರೆ ಅವನು ಹಾಗೇನೂ ಮಾಡಲಿಲ್ಲ. ಒಂದು ವೇಳೆ ನಿಮಗೆ ಯಾರಾದರೂ ಇಷ್ಟವಾದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೊದಲು ಸ್ವಾವಲಂಬಿಗಳಾಗಿ, ಆಮೇಲೆ ಮದುವೆಯಾಗಿ, ಎಂದರು.
ಹುಡುಗಿಯರು ಐ.ಎ.ಎಸ್. ಆಗುವ ಮುನ್ನ ಉತ್ತಮ ತಾಯಿಯಾಗಬೇಕು!
ರಾಜ್ಯಪಾಲೆ ಆನಂದಿಬೇನ್ ಪಟೇಲ್ ಅವರು ಮುಂದುವರಿದು ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾರೆ, ಆಗ ಯೂಟ್ಯೂಬ್ ನೋಡಿ ಅಡುಗೆ ಮಾಡುತ್ತಾರೆ. ವಿಡಿಯೋ ನೋಡಿ ಅರೆಬರೆ ಅಡುಗೆ ಮಾಡುತ್ತಾರೆ. ನಂತರ ಅತ್ತೆಯ ಮಾತುಗಳನ್ನು ಕೇಳಬೇಕಾಗುತ್ತದೆ. ಅದಕ್ಕಾಗಿಯೇ ನಾನು ಮಹಿಳೆಯರಿಗೆ ಹೇಳುತ್ತೇನೆ, ಕನಿಷ್ಠ ಪಕ್ಷ ಅಡುಗೆ ಮಾಡುವುದಾದರೂ ಅವರಿಗೆ ಬರಲೇಬೇಕು. ನೀವು ಶಿಕ್ಷಕರಾಗಿ ಅಥವಾ ಐ.ಎ.ಎಸ್. (ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ – ಭಾರತೀಯ ಆಡಳಿತ ಸೇವೆ) ಅಧಿಕಾರಿಯಾಗಿ, ಆದರೆ ಅದಕ್ಕಿಂತ ಮುಂಚೆ ನೀವು ಉತ್ತಮ ತಾಯಿಯಾಗಬೇಕು ಎಂದು ಹೇಳಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ