ಎಐ’ ಆಧಾರಿತ ಕಾವಲು ವ್ಯವಸ್ಥೆಯಿಂದಾಗಿ ಅನಂತನಾಗನಲ್ಲಿ 3 ಶಂಕಿತ ಉಗ್ರರ ಬಂಧನ : Terrorists Nabbed

(‘ಎಐ’ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ಧಿಮತ್ತೆ)

ಬಂಧಿತ ಶಂಕಿತ ಭಯೋತ್ಪಾದಕರು

ಶ್ರೀನಗರ (ಜಮ್ಮು-ಕಾಶ್ಮೀರ) – ಅನಂತನಾಗ ಪೊಲೀಸರು ಸರಬಲ್‌ ನಲ್ಲಿ ಕೃತಕ ಬುದ್ಧಿಮತ್ತೆಯ ಮೂಲಕ ಕಾರ್ಯನಿರ್ವಹಿಸುವ ‘ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (ಮುಖ ಗುರುತಿಸುವ ವ್ಯವಸ್ಥೆ) ಸಹಾಯದಿಂದ ಶಂಕಿತರೆಂದು ಗುರುತಿಸಿದ ನಂತರ, 3 ಶಂಕಿತ ‘ಓವರ್‌ ಗ್ರೌಂಡ್ ವರ್ಕರ್ಸ್’ಗಳನ್ನು (ಯಾವ ವ್ಯಕ್ತಿ ಬಹಿರಂಗವಾಗಿ ಸಾಮಾನ್ಯ ನಾಗರಿಕನಾಗಿ ವಾಸಿಸುತ್ತಾನೋ; ಆದರೆ ರಹಸ್ಯವಾಗಿ ಭಯೋತ್ಪಾದಕ ಗುಂಪುಗಳಿಗೆ ಸಹಾಯ ಮಾಡುತ್ತಾನೋ ಅಂತಹವರನ್ನು) ಬಂಧಿಸಿದರು.

ಮುಖ್ಯ ಸ್ಥಳಗಳಲ್ಲಿ ಅಳವಡಿಸಲಾದ ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆಯು ಈ ಮೂವರನ್ನು ಗುರುತಿಸಿದೆ, ಅದರ ಆಧಾರದ ಮೇಲೆ ಪೊಲೀಸರು ಅವರನ್ನು ತಡೆದು ಅವರ ಗುರುತನ್ನು ಪರಿಶೀಲಿಸಿದರು ಮತ್ತು ನಂತರ ಅವರನ್ನು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಸಂದಣಿಯ ಮೇಲೆ ನಿಗಾ ಇಡಲು, ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ತಲೆಮರೆಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಲು ವ್ಯಾಪಕವಾದ ಕಾವಲು ನಡೆಸಲು ಈ ವರ್ಷ 600 ಕ್ಕೂ ಹೆಚ್ಚು ಎಐ-ಸಕ್ರಿಯಗೊಳಿಸಿದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ಖಚಿತಪಡಿಸಿವೆ.