ಮಗಳು ಸೇರಿದಂತೆ ೭ ಜನರ ಬಂಧನ

ಜೈಪುರ (ರಾಜಸ್ಥಾನ) – ಅನುಕಂಪದ ಆಧಾರದ ಮೇಲೆ ತಾಯಿಗೆ ಸಿಕ್ಕಿದ ನೌಕರಿ ತನಗೆ ಸಿಗಬೇಕು ಮತ್ತು ಆಸ್ತಿಯಲ್ಲಿ ಪಾಲು ಸಿಗಬೇಕು ಎಂಬ ಕಾರಣಕ್ಕಾಗಿ ಮಗಳೊಬ್ಬಳು ಸುಪಾರಿ ನೀಡಿ ತಾಯಿಯನ್ನು ಹತ್ಯೆ ಮಾಡಿಸಿದ ಘಟನೆ ಇಲ್ಲಿನ ಪ್ರತಾಪನಗರದಲ್ಲಿ ನಡೆದಿದೆ. ನ್ಯಾಯಾಲಯದ ಕ್ಲರ್ಕ ಆಗಿದ್ದ ೪೫ ವರ್ಷದ ಶ್ರೀಮತಿ ನೀರಜ್ ಶರ್ಮಾ ಅವರನ್ನು ಕಾರ್ ಅಡಿಯಲ್ಲಿ ಹೊಸಕಿ ಹಾಕಿ ಹತ್ಯೆ ಮಾಡಲಾಗಿತ್ತು. ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಅಪಘಾತವಲ್ಲ, ಬದಲಿಗೆ ಮುಂಚಿತವಾಗಿಯೇ ಯೋಜಿಸಿದ ಕೊಲೆ ಎಂಬ ಸಂಶಯ ಪೊಲೀಸರಿಗೆ ಬಂದಿತ್ತು. ತನಿಖೆಯಿಂದ ಕೌಟುಂಬಿಕ ಪಿತೂರಿ ಮತ್ತು ಬಾಡಿಗೆ ಹಂತಕರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ನೀರಜ್ ಅವರ ಮಗಳು ಆಯುಷಿ ಶರ್ಮಾ ಸೇರಿದಂತೆ ೭ ಜನರನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಪೊಲೀಸ್ ಉಪ ಆಯುಕ್ತರಾದ ರಂಜಿತಾ ಶರ್ಮಾ ಅವರು, ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಪತಿಯ ನಿಧನದ ನಂತರ ನೀರಜ್ ಅವರಿಗೆ ಅನುಕಂಪದ ಆಧಾರದ ಮೇಲೆ ನ್ಯಾಯಾಲಯದಲ್ಲಿ ಕಿರಿಯ ಲಿಪಿಕರಾಗಿ ಸರಕಾರಿ ನೌಕರಿ ಸಿಕ್ಕಿತ್ತು. ಮಗಳು ಆಯುಷಿಗೆ ಆ ಸರಕಾರಿ ನೌಕರಿ ಬೇಕಾಗಿತ್ತು; ಆದರೆ ನೀರಜ್ ಅವರೇ ಸ್ವತಃ ಆ ನೌಕರಿಯನ್ನು ಸ್ವೀಕರಿಸಿದ್ದರು. ಇದಲ್ಲದೆ ಕಳೆದ ೨-೩ ವರ್ಷಗಳಿಂದ ತಾಯಿ ಮತ್ತು ಮಗಳ ನಡುವೆ ಆಸ್ತಿ ವಿಷಯವಾಗಿಯೂ ವಿವಾದ ನಡೆದಿತ್ತು. ನೌಕರಿ ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲು ಆಯುಷಿ ತನ್ನ ಚಿಕ್ಕಪ್ಪ ಮೋಹನ ಸ್ವರೂಪ ಮತ್ತು ಸೋದರಸಂಬಂಧಿ ಬಲರಾಮ ಉರ್ಫ್ ರವಿ ಎಂಬುವವರ ಜೊತೆಗೂಡಿ ತಾಯಿಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಇದಕ್ಕಾಗಿ ಅವರು ಭರತಪುರದ ಹೇಮಂತ ಶರ್ಮಾ ಎಂಬಾತನಿಗೆ ೭ ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ