
ರಾಯಪುರ (ಛತ್ತೀಸಗಢ) – ರಾಜ್ಯದ ಮುಸಲ್ಮಾನ ಯುವಕ ಅಥವಾ ಯುವತಿ ಮುಸಲ್ಮಾನೇತರ ವ್ಯಕ್ತಿಯೊಂದಿಗೆ ನಿಕಾಹ್ (ಇಸ್ಲಾಮಿಕ್ ಪದ್ಧತಿಯಂತೆ ವಿವಾಹ) ಮಾಡಿಕೊಳ್ಳಬೇಕಾದರೆ, ಮೊದಲು ವಕ್ಫ್ ಮಂಡಳಿಯ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಇದಕ್ಕಾಗಿ ಉಭಯ ಪಕ್ಷಗಳ ಒಪ್ಪಿಗೆ, ಅಗತ್ಯ ದಾಖಲೆಗಳು ಮತ್ತು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಅನುಮತಿಯಿಲ್ಲದೆ ನಿಕಾಹ್ ಮಾಡಿಸುವ ಮೌಲಾನಾಗಳ (ಇಸ್ಲಾಮಿಕ್ ವಿದ್ವಾಂಸರ) ಮೇಲೆಯೂ ಕ್ರಮ ಕೈಗೊಳ್ಳಬಹುದು.
೧. ಹೊಸ ವ್ಯವಸ್ಥೆಯ ಪ್ರಕಾರ, ರಾಜ್ಯದಲ್ಲಿ ನಿಕಾಹ್ ಮಾಡಿಸುವ ಎಲ್ಲಾ ಮೌಲಾನಾಗಳನ್ನು ನೋಂದಣಿ ಮಾಡಲಾಗುವುದು ಮತ್ತು ನೋಂದಾಯಿತ ಮೌಲಾನಾಗಳಿಗೆ ಮಾತ್ರ ನಿಕಾಹ್ ಮಾಡಿಸಲು ಅವಕಾಶವಿರುತ್ತದೆ.
೨. ಹೀಗೆ ಮಾಡುವುದರಿಂದ ಸುಳ್ಳು ಗುರುತು ಹೇಳಿ ಅಥವಾ ದಾಖಲೆಗಳನ್ನು ಮುಚ್ಚಿಟ್ಟು ಮದುವೆಯಾಗುವವರ ಮೇಲೆ ಪರಿಣಾಮಕಾರಿಯಾಗಿ ನಿಗಾ ಇಡಬಹುದು ಎಂದು ಮಂಡಳಿ ಹೇಳಿದೆ.
೩. ವಕ್ಫ್ ಮಂಡಳಿಯ ಪದಾಧಿಕಾರಿಗಳು, ಆದಿವಾಸಿ ಪ್ರದೇಶದ ಮಹಿಳೆಯರನ್ನು ವಂಚಿಸಿ ವಿವಾಹವಾಗುವುದು ಮತ್ತು ಆಸ್ತಿ ವಿವಾದಗಳಿಗೆ ಸಂಬಂಧಿಸಿದ ಕೆಲವು ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಈ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಪ್ರಕರಣಗಳ ಮೇಲೆ ನಿಗಾ ಇಡಲು ಮತ್ತು ಎಲ್ಲಾ ನಿಕಾಹ್‌ಗಳ ದಾಖಲೆಗಳನ್ನು ಸುರಕ್ಷಿತವಾಗಿಡಲು ಯೋಜನೆ ರೂಪಿಸಲಾಗಿದೆ.
೪. ಮಂಡಳಿಯ ಅಧ್ಯಕ್ಷ ಡಾ. ಸಲೀಂ ರಾಜ್ ಅವರ ಪ್ರಕಾರ, ‘ಸದ್ಯಕ್ಕೆ ಹಲವು ಕಡೆಗಳಲ್ಲಿ ನಿಕಾಹ್ ನ ಯಾವುದೇ ಸಂಯೋಜಿತ ದಾಖಲೆಗಳನ್ನು ಇಡಲಾಗುತ್ತಿಲ್ಲ. ಇದರಿಂದಾಗಿ ನಂತರದ ದಿನಗಳಲ್ಲಿ ವೈವಾಹಿಕ ಸ್ಥಿತಿ, ಗುರುತು ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ವಿವಾದಗಳು ಉಂಟಾಗುತ್ತವೆ. ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಪ್ರತಿಯೊಂದು ನಿಕಾಹ್ ನ ದಾಖಲೆಯು ವಕ್ಫ್ ಮಂಡಳಿಯ ಬಳಿ ಸುರಕ್ಷಿತವಾಗಿರುತ್ತದೆ ಮತ್ತು ನಿಗದಿತ ಪ್ರಕ್ರಿಯೆಯಂತೆ ಪ್ರಮಾಣಪತ್ರವನ್ನೂ ನೀಡಲಾಗುವುದು.’
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !