ಅಮರನಾಥ: 5 ದಿನದಲ್ಲೇ ಮಂಜುಗಡ್ಡೆ ಶಿವಲಿಂಗ ಕರಗಿತು : Amarnath Yatra News

೩ ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನ ಬಾಕಿ

ಅಮರನಾಥ ಗುಹೆಯಲ್ಲಿನ ನೈಸರ್ಗಿಕ ಹಿಮವು ಬಹುತೇಕ ಸಂಪೂರ್ಣವಾಗಿ ಕರಗಿದೆ.

ಅಮರನಾಥ (ಜಮ್ಮು-ಕಾಶ್ಮೀರ) – ಇಲ್ಲಿನ ಅಮರನಾಥ ಗುಹೆಯಲ್ಲಿನ ನೈಸರ್ಗಿಕ ಮಂಜುಗಡ್ಡೆಯ ಶಿವಲಿಂಗವು ಬಹುತೇಕ ಸಂಪೂರ್ಣವಾಗಿ ಕರಗಿದೆ. ಯಾತ್ರೆ ಆರಂಭವಾಗಿ ಕೇವಲ ೫ ದಿನಗಳಾಗಿದ್ದು, ಇನ್ನು ೫೪ ದಿನಗಳ ಕಾಲ ಈ ಯಾತ್ರೆ ಮುಂದುವರಿಯಲಿದೆ. ಕಳೆದ ೪ ದಿನಗಳಲ್ಲಿ ೮೬ ಸಾವಿರ ಭಕ್ತರು ಪವಿತ್ರ ಗುಹೆಯಲ್ಲಿ ದರ್ಶನ ಪಡೆದಿದ್ದಾರೆ. ಈ ಸಂಖ್ಯೆ ಪ್ರತಿದಿನ ೧ ಲಕ್ಷ ದಾಟುವ ಸಾಧ್ಯತೆ ಇದೆ. ಯಾತ್ರೆಗಾಗಿ ಈ ವರ್ಷ ೪ ಲಕ್ಷ ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.

ಮೇ ೨೩ ರಂದು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ಬಿಡುಗಡೆ ಮಾಡಿದ ಚಿತ್ರದಲ್ಲಿ ಶಿವಲಿಂಗದ ಗಾತ್ರ ೭ ಅಡಿ ಇತ್ತು. ಜೂನ್ ೨೯ ರ ಮೊದಲ ಪೂಜೆಯ ದಿನದಂದೂ ಶಿವಲಿಂಗದ ಎತ್ತರ ೫ ಅಡಿಗಿಂತ ಹೆಚ್ಚಿತ್ತು. ಜುಲೈ ೬ ರಂದು ಮುನ್ನೆಲೆಗೆ ಬಂದ ಚಿತ್ರದಲ್ಲಿ ಅದು ಶೇಕಡಾ ೯೦ ರಷ್ಟು ಕರಗಿರುವುದು ಕಂಡುಬಂದಿದೆ.