ಮಧ್ಯಪ್ರದೇಶ ಸರಕಾರದ ಐತಿಹಾಸಿಕ ನಿರ್ಧಾರ!

ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಬಿಜೆಪಿ ಸರಕಾರ ‘ವಕ್ಫ್ ಬೋರ್ಡ್’ ಪುನರ್ರಚನೆ ಮಾಡಿದ್ದು ೧೦ ಸದಸ್ಯರ ನೂತನ ಮಂಡಳಿಯನ್ನು ಸ್ಥಾಪಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಹಿಂದೂ ಸದಸ್ಯರನ್ನು ವಕ್ಫ್ ಬೋರ್ಡ್ ಗೆ ನೇಮಕ ಮಾಡಿ ಕೊಳ್ಳಲಾಗಿದೆ. ಈ ಕುರಿತಾದ ಅಧಿಕೃತ ಅಧಿಸೂಚನೆಯನ್ನು ಮಧ್ಯಪ್ರದೇಶ ಸರಕಾರದ ರಾಜಪತ್ರದಲ್ಲಿ ಪ್ರಕಟಿಸಲಾಗಿದೆ. ಮನೋಜ್ ಮಾಲ್ಪಾಣಿ (ಇಂದೋರ್ ನಿವಾಸಿ) ಮತ್ತು ಅನಿಮೇಶ್ ಭಾರ್ಗವ್ (ರಾಘೋಗಢ್, ಗುಣಾ ನಿವಾಸಿ) ಇವರಿಬ್ಬರು ನೂತನವಾಗಿ ನೇಮಕಗೊಂಡಿರುವ ಹಿಂದೂ ಸದಸ್ಯರಾಗಿದ್ದಾರೆ. ‘ವಕ್ಫ್ ಬೋರ್ಡ್’ನ ಅಧ್ಯಕ್ಷರಾಗಿ ಸನ್ವರ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ.
ಕೇಂದ್ರ ಸರಕಾರವು ವಕ್ಫ್ ಕಾಯ್ದೆಯಲ್ಲಿ ಮಾಡಿರುವ ಮಹತ್ವದ ಸುಧಾರಣೆಗಳ ನಂತರ ಮಧ್ಯಪ್ರದೇಶ ಸರಕಾರವು ‘ವಕ್ಫ್ ಕಾಯ್ದೆ, ೧೯೯೫ (ಸುಧಾರಿತ-೨೦೨೫)’ ರ ಕಲಂ ೧೩ (೧) ರ ಅಡಿಯಲ್ಲಿ ದೊರೆತಿರುವ ಅಧಿಕಾರವನ್ನು ಬಳಸಿಕೊಂಡು ಕಲಂ ೧೪ ರ ನಿಬಂಧನೆಗಳ ಪ್ರಕಾರ ಈ ಮಂಡಳಿಯನ್ನು ಸ್ಥಾಪಿಸಿದೆ. ಹೊಸ ನಿಯಮಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂಬುದು ಈ ಪುನರ್ರಚನೆಯ ಮುಖ್ಯ ಉದ್ದೇಶವಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ