ಜಲಾಲಾಬಾದ್ ಈಗ ‘ಭಗವಾನ ಪರಶುರಾಮ ಪುರಿ’: Jalalabad Renamed

ಉತ್ತರಪ್ರದೇಶ ಸರಕಾರದ ಶ್ಲಾಘನೀಯ ನಿರ್ಧಾರ !

ಯೋಗಿ ಆದಿತ್ಯನಾಥ್

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರವು ಶಹಜಹಾನಪುರ ಜಿಲ್ಲೆಯ ಜಲಾಲಾಬಾದ ತಾಲೂಕಿನ ಹೆಸರನ್ನು ಬದಲಾಯಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಜುಲೈ 6 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಲಾಲಾಬಾದ ತಾಲೂಕಿನ ಹೊಸ ಹೆಸರನ್ನು ‘ಭಗವಾನ ಪರಶುರಾಮ ಪುರಿ’ ಎಂದು ಬದಲಾಯಿಸುವ ಪ್ರಸ್ತಾವನೆಗೆ ಸಮ್ಮತಿ ನೀಡಲಾಯಿತು.

1. ಸಚಿವ ಸಂಪುಟದ ಸಮ್ಮತಿ ದೊರೆತ ನಂತರ ಈಗ ಹೆಸರು ಬದಲಾವಣೆಗೆ ಸಂಬಂಧಿಸಿದ ಅಗತ್ಯ ಆಡಳಿತಾತ್ಮಕ ಮತ್ತು ಕಂದಾಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಇದರ ನಂತರ ಹೊಸ ಹೆಸರನ್ನು ಸರಕಾರಿ ದಾಖಲೆಗಳಲ್ಲಿ ಮತ್ತು ಇತರ ಅಧಿಕೃತ ಪತ್ರಗಳಲ್ಲಿ ಜಾರಿಗೆ ತರಲಾಗುವುದು.

2. ಈ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸುಮಾರು 28 ಪ್ರಮುಖ ಪ್ರಸ್ತಾವನೆಗಳಿಗೂ ಮುದ್ರೆ ಹಾಕಲಾಯಿತು.

3. ‘ಉತ್ತರಪ್ರದೇಶ ಸ್ಟಾರ್ಟ್‌ಅಪ್ ನೀತಿ-2026’ ಮತ್ತು ‘ಡೇಟಾ ಸೆಂಟರ್ ನೀತಿ-2026’ ಈ ಉಪಕ್ರಮಗಳಿಗೂ ಸಚಿವ ಸಂಪುಟವು ಸಮ್ಮತಿ ನೀಡಿದೆ. ‘ಈ ನೀತಿಗಳಿಂದ ಹೂಡಿಕೆದಾರರು ರಾಜ್ಯದತ್ತ ಆಕರ್ಷಿತರಾಗಲಿದ್ದಾರೆ, ಉದ್ಯೋಗದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ, ಹಾಗೂ ರಾಜ್ಯದ ಡಿಜಿಟಲ್ ಮತ್ತು ಕೈಗಾರಿಕಾ ಆರ್ಥಿಕತೆಗೆ ವೇಗ ದೊರೆಯಲಿದೆ’ ಎಂದು ಸರಕಾರ ಹೇಳಿದೆ.

ಸಂಪಾದಕೀಯ ನಿಲುವು

ಈಗ ಕೇಂದ್ರ ಸರಕಾರವು ಭಾರತದಲ್ಲಿನ ನಗರಗಳು, ಹಳ್ಳಿಗಳು ಮತ್ತು ಜಿಲ್ಲೆಗಳಿಗಿರುವ ವಿದೇಶಿ ದಾಳಿಕೋರರ ಹೆಸರುಗಳನ್ನು ಅಳಿಸಿಹಾಕಲು ರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನವನ್ನು ಕೈಗೊಳ್ಳುವುದು ಅವಶ್ಯಕವಾಗಿದೆ !