
ಕೊಲಕಾತಾ (ಬಂಗಾಳ) – ಇಲ್ಲಿನ ಸಂಬಾರುಯಿಪುರದಲ್ಲಿ 12 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ನಡೆಸಿ ಕೊಲೆ ಮಾಡಲಾಗಿದೆ. ಆಕೆಯ ಮೃತದೇಹ ಪತ್ತೆಯಾದ ನಂತರ ಆಕ್ರೋಶಗೊಂಡ ಜನಸಮೂಹವು ಶಂಕಿತ ಅತ್ಯಾಚಾರಿಯನ್ನು ಹೊಡೆದು ಕೊಂದಿದೆ.
1. ಸಂಬಾರುಯಿಪುರದಲ್ಲಿ 12 ವರ್ಷದ ಬಾಲಕಿಯ ಮೃತದೇಹವು ಚೀಲವೊಂದರಲ್ಲಿ ಪತ್ತೆಯಾಗಿದೆ. ಈ ಬಾಲಕಿಯು ಜುಲೈ 5 ರಂದು ತನ್ನ ಗೆಳತಿಗೆ ಉಡುಗೊರೆಯನ್ನು ತರಲು ಮನೆಯಿಂದ ಹೊರಗೆ ಹೋಗಿದ್ದಳು; ಆದರೆ ಆ ನಂತರ ಅವಳು ನಾಪತ್ತೆಯಾಗಿದ್ದಳು. ‘ನಾಲ್ವರು ಆಕೆಯನ್ನು ಬಲವಂತವಾಗಿ ಅಪಹರಿಸಿದ್ದಾರೆ’ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಬಾಲಕಿಯ ಮೃತದೇಹ ಸಿಕ್ಕ ನಂತರ ಜನಸಮೂಹವು ತೀವ್ರ ಆಕ್ರೋಶಗೊಂಡು ಶಂಕಿತನನ್ನು ಕೊಲೆ ಮಾಡಿದೆ.
2. ಬಾಲಕಿಯ ಮೇಲೆ ಬಲಾತ್ಕಾರ ನಡೆಸಿ ಅವಳ ಕೊಲೆ ಮಾಡಿದ ನಂತರ ಪ್ರದೇಶದಲ್ಲಿ ಭಾರಿ ಉದ್ವಿಗ್ನತೆ ಉಂಟಾಗಿದೆ. ಆಕ್ರೋಶಗೊಂಡ ಜನಸಮೂಹವು ಹಿಂಸಾತ್ಮಕ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿತು, ಟೈರ್ ಗಳನ್ನು ಸುಟ್ಟುಹಾಕಿತು ಮತ್ತು ಸರಕಾರಿ ವಾಹನಗಳನ್ನು ಧ್ವಂಸಗೊಳಿಸಿತು.
3. ಈ ಘೋರ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರೆಸಿಡೆನ್ಸಿ ರೇಂಜ್ ನ ಪೊಲೀಸ್ ಮಹಾನಿರೀಕ್ಷಕ ಕಂಕಣಪ್ರಸಾದ ಬಾರುಯಿ ಅವರು ಭರವಸೆ ನೀಡಿದ ನಂತರ ಜನಸಮೂಹವು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು. ತದನಂತರವಷ್ಟೇ ಶವಪರೀಕ್ಷೆಗಾಗಿ ಬಾಲಕಿಯ ಮೃತದೇಹವನ್ನು ಕೊಂಡೊಯ್ಯಲು ಜನಸಮೂಹವು ಸಮ್ಮತಿಸಿತು.
4. ಶವಪರೀಕ್ಷೆಯ ನಂತರವಷ್ಟೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 4 ಜನರನ್ನು ಬಂಧಿಸಲಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ