ಹಾಸನದಿಂದ ಹಿಂದುತ್ವನಿಷ್ಠ ನಾಯಕ ಪುನೀತ್ ಕೆರೆಹಳ್ಳಿ ಬಂಧನ!

ಮೌಲ್ವಿಯೊಬ್ಬರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ

ಬೆಂಗಳೂರು – ಹಿಂದುತ್ವನಿಷ್ಠ ನಾಯಕ ಮತ್ತು ‘ರಾಷ್ಟ್ರಪಡೆ’ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರು ಪೊಲೀಸರು ಹಾಸನದಿಂದ ಬಂಧಿಸಿದರು. ಮೌಲ್ವಿಯೊಬ್ಬರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸಹೋದರನ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಕೆರೆಹಳ್ಳಿಯನ್ನು ಅಲ್ಲಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಯಿತು. (ಇಂತಹ ಕ್ರಮವನ್ನು ಎಂದಾದರೂ ಮುಸ್ಲಿಮರು ಹಿಂದೂ ಸಂತರಿಗೆ ಅವಮಾನ ಮಾಡಿದಾಗ ಕೈಗೊಳ್ಳಲಾಗುತ್ತದೆಯೇ? – ಸಂಪಾದಕರು)

ಸಂಪಾದಕೀಯ ನಿಲುವು

ಪಾಕಿಸ್ತಾನದಂತೆ ಹಿಂದೂ ವಿರೋಧಿ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ಸರಕಾರದ ಪೊಲೀಸರಿಂದ ಇಂತಹ ಕ್ರಮ ಆಗಿಲ್ಲದಿದ್ದರೆ ಅಚ್ಚರಿಯೇ ಸರಿ!