ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ

ನವ ದೆಹಲಿ – ಎಐ ಮೂಲಕ ಸಿದ್ಧಪಡಿಸಲಾದ ನಕಲಿ ಕಾನೂನು ಉದಾಹರಣೆಗಳ ಬಳಕೆ ಅತ್ಯಂತ ಅಪಾಯಕಾರಿಯಾಗಿದೆ. ಈ ಅಪಾಯವು ಭೋಪಾಲ್ ಗ್ಯಾಸ್ ದುರಂತದ ವಿಷಾನಿಲ ಸೋರಿಕೆಯಷ್ಟೇ ದೊಡ್ಡದಾಗಿದೆ. ಆದ್ದರಿಂದ ಎಐ ಬಳಕೆಯನ್ನು ಮಾನವ ಮೇಲ್ವಿಚಾರಣೆಯಲ್ಲೇ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಆಲೋಕ ಅರಾಧೆ ಅವರ ಪೀಠವು ‘ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್’ (ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ) ತೀರ್ಪನ್ನು ರದ್ದುಗೊಳಿಸುವಾಗ ಈ ಟಿಪ್ಪಣಿ ಮಾಡಿದೆ. ಎಐ ಮೂಲಕ ಸಿದ್ಧಪಡಿಸಲಾದ ಸುಳ್ಳು ಮತ್ತು ಅಸ್ತಿತ್ವದಲ್ಲೇ ಇಲ್ಲದ ತೀರ್ಪುಗಳನ್ನು ನ್ಯಾಯಾಲಯದಲ್ಲಿ ಸತ್ಯ ಎಂದು ಮಂಡಿಸುವುದು ನ್ಯಾಯಾಂಗ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತದೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಯಾವುದೇ ಮೃದು ಧೋರಣೆ ತೋರಿಸಬಾರದು ಎಂದು ಪೀಠವು ಹೇಳಿದೆ.
ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಎಐ ಬಗ್ಗೆ ನಿಖರವಾಗಿ ಹೇಳಿದ್ದೇನು?
೧. (ಎಐ ನೀಡಿದ) ನಕಲಿ ಕಾನೂನು ಮಾಹಿತಿ ಮೇಲ್ನೋಟಕ್ಕೆ ಸಣ್ಣ ವಿಷಯದಂತೆ ಕಾಣಿಸಬಹುದು; ಆದರೆ ಅದು ತುಂಬಾ ಅಪಾಯಕಾರಿಯಾಗಿದೆ. ಇದರಿಂದ ನ್ಯಾಯಾಂಗ ಪ್ರಕ್ರಿಯೆಗೆ ಧಕ್ಕೆಯುಂಟಾಗುತ್ತದೆ ಮತ್ತು ನ್ಯಾಯಾಲಯದ ತೀರ್ಪುಗಳ ಮೇಲಿನ ಜನರ ವಿಶ್ವಾಸವೂ ಕಡಿಮೆಯಾಗಬಹುದು.
೨. ನ್ಯಾಯಾಲಯವು ಎಐ ತಂತ್ರಜ್ಞಾನದ ವಿರೋಧಿಯಲ್ಲ. ತೊಂದರೆ ಇರುವುದು ಎಐನಲ್ಲಿ ಅಲ್ಲ, ಬದಲಿಗೆ ಅದರ ಮೂಲಕ ಸಿದ್ಧಪಡಿಸಲಾದ ಸುಳ್ಳು ಮಾಹಿತಿಯನ್ನು ಸತ್ಯ ಎಂದು ಮಂಡಿಸುವುದರಲ್ಲಿ ಇದೆ. ಆದ್ದರಿಂದ ಎಐ ಬಳಕೆಯನ್ನು ಎಚ್ಚರಿಕೆಯಿಂದ, ಪರಿಶೀಲನೆಯೊಂದಿಗೆ ಮತ್ತು ಮಾನವ ಮೇಲ್ವಿಚಾರಣೆಯಲ್ಲೇ ಮಾಡಬೇಕು.
೩. ಎಐ ಅನ್ನು ಬಳಸಿಕೊಳ್ಳಬಹುದು; ಆದರೆ ಅಂತಿಮ ನಿರ್ಧಾರ ಮತ್ತು ಪರಿಶೀಲನೆಯನ್ನು ಯಾವಾಗಲೂ ಮಾನವರೇ ಮಾಡಬೇಕು.
೪. ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ ಒಂದು ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ನ್ಯಾಯಾಲಯಗಳಲ್ಲಿ ಎಐ ಮೂಲಕ ಸಿದ್ಧಪಡಿಸಲಾದ ನಕಲಿ ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಮಂಡಿಸುವುದನ್ನು ತಡೆಯುವ ಹಾಗೂ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತಹ ನಿಯಮಗಳನ್ನು ರೂಪಿಸಲಿದೆ.
ಏನಿದು ಪ್ರಕರಣ?
ಕಂಪನಿಗಳ ನಡುವಿನ ವಿವಾದಗಳು ಹಾಗೂ ದಿವಾಳಿತನದಂತಹ ಪ್ರಕರಣಗಳನ್ನು ನಿರ್ವಹಿಸುವ ‘ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್’, ಒಂದು ಪ್ರಕರಣದಲ್ಲಿ ತನ್ನ ತೀರ್ಪನ್ನು ಸಿದ್ಧಪಡಿಸಲು ಕೆಲವು ಕಾನೂನು ಪ್ರಕರಣಗಳ ಉಲ್ಲೇಖವನ್ನು ನೀಡಿತ್ತು. ಅವುಗಳಲ್ಲಿ ಹಲವು ಪ್ರಕರಣಗಳು ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ. ಅವುಗಳನ್ನು ಎಐ ಬಳಸಿ ಸಿದ್ಧಪಡಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಾಲಯವು ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ