ಬೆಂಗಳೂರು ಪೊಲೀಸರಿಂದ 12 ಬಾಂಗ್ಲಾದೇಶಿ ನುಸುಳುಕೋರರು ವಶಕ್ಕೆ!

12 ಜನರ ಪೈಕಿ 10 ಮಂದಿ ಮಹಿಳೆಯರಾಗಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು

ಬೆಂಗಳೂರು – ಬಂಗಾಳವಾಗಿ ಭಾರತಕ್ಕೆ ಪ್ರವೇಶಿಸಿ ಬೆಂಗಳೂರಿನಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದ 12 ಬಾಂಗ್ಲಾದೇಶಿ ನುಸುಳುಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸುಹಾಗ್ ಮೊನ್ಸುರಲಿ ಮತ್ತು ಮುಕುಲ್ ಎಂಬ ಇಬ್ಬರು ಪುರುಷರಾಗಿದ್ದು, ಉಳಿದ 10 ಜನರು ಮಹಿಳೆಯರು ಎಂದು ತಿಳಿದುಬಂದಿದೆ. ಪೊಲೀಸರು ಇವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (FRRO) ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

ಬಾಣಸವಾಡಿ ಮತ್ತು ಹೆಣ್ಣೂರು ಭಾಗಗಳಲ್ಲಿ ಮಾನವ ಕಳ್ಳಸಾಗಣೆ (ಹ್ಯೂಮನ್ ಟ್ರಾಫಿಕಿಂಗ್) ಮೂಲಕ ಕೆಲವು ಮಹಿಳೆಯರನ್ನು ಬಾಂಗ್ಲಾದೇಶದಿಂದ ಕರೆತಂದು ವೇಶ್ಯಾವಾಟಿಕೆಗೆ ತಳ್ಳಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು. ಈ ಎಲ್ಲರ ಬಳಿ ಬಾಂಗ್ಲಾದೇಶದ ಗುರುತಿನ ಚೀಟಿಗಳು ಪತ್ತೆಯಾಗಿವೆ. ಇವರೆಲ್ಲರೂ 2 ತಿಂಗಳ ಹಿಂದೆ ಬಂಗಾಳದ ಮೂಲಕ ಭಾರತಕ್ಕೆ ಪ್ರವೇಶಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಗಡಿ ದಾಟುವಾಗ ಮಧ್ಯವರ್ತಿಗಳಿಗೆ ಸಾವಿರಾರು ರೂಪಾಯಿ ಹಣ ನೀಡಿ ಮಹಿಳೆಯರನ್ನು ಭಾರತಕ್ಕೆ ಕರೆತರಲಾಗಿತ್ತು.