ಹಿಂದೂ ಯುವತಿಯರಿಗೆ ವಂಚನೆ ಆರೋಪ: ರೇಹಾನ್ ಅನ್ಸಾರಿ ವಿರುದ್ಧ ಕೇಸ್ : Rehan Ansari Fraud Case

ಗಯಾ (ಬಿಹಾರ) – ಬಿಹಾರದ ಗಯಾದಲ್ಲಿ ರೇಹಾನ್ ಅನ್ಸಾರಿ ಎಂಬ ಮುಸ್ಲಿಂ ಯುವಕನು ಹಿಂದೂ ಹುಡುಗಿಯರ ಅಶ್ಲೀಲ ವೀಡಿಯೊಗಳನ್ನು ತಯಾರಿಸಿ ಅವರಿಗೆ ವಂಚಿಸಿ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿರುವ ಘಟನೆ ಬೆಳಕಿಗೆ ಬಂದಿದೆ. ರೇಹಾನ್ ೨೦ ಹಿಂದೂ ಯುವತಿಯರನ್ನು ತನ್ನ ಜಾಲಕ್ಕೆ ಸಿಲುಕಿಸುವ ಗುರಿಯನ್ನು ಹೊಂದಿದ್ದನು. ಪೊಲೀಸರ ತನಿಖೆಯಲ್ಲಿ ಇದುವರೆಗೆ ೬ ಹುಡುಗಿಯರ ವೀಡಿಯೊಗಳು ಪತ್ತೆಯಾಗಿವೆ. ಒಬ್ಬ ಅಪ್ರಾಪ್ತ ವಯಸ್ಕ ಹಿಂದೂ ಹುಡುಗಿಯ ಕುಟುಂಬಸ್ಥರು ರೇಹಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ‘ಪೋಕ್ಸೋ’ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರೇಹಾನ್ ವಿರುದ್ಧ ದೂರು ದಾಖಲಾದ ನಂತರ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರೇಹಾನ್‌ನ ಅಣ್ಣನೂ ಸಹ ಅದೇ ಭಾಗದ ಹಿಂದೂ ಹುಡುಗಿಯೊಬ್ಬಳನ್ನು ವಂಚಿಸಿ ಮದುವೆಯಾಗಿದ್ದನು.