(‘ನಿಯತ್’ ಎಂದರೆ ಉದ್ದೇಶ ಅಥವಾ ಆಶಯ)

ನವದೆಹಲಿ – ನಿಯತ್, ನೀತಿ ಮತ್ತು ನಿರ್ಣಯಗಳಿಂದ ಭಾರತದ ಅಭಿವೃದ್ಧಿಗೆ ಹೊಸ ವೇಗ ದೊರೆತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ತಿಳಿಸಿದರು. ನರೇಂದ್ರ ಮೋದಿ ಅವರು ಭಾರತದ ಸತತ ಅತಿ ದೀರ್ಘಾವಧಿಯ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ ದಾಖಲೆಯನ್ನು ನಿರ್ಮಿಸಿದ ನಿಮಿತ್ತ ‘ಭಾರತ ಮಂಟಪಂ’ನಲ್ಲಿ ಭಾಜಪ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಘಟಕ ಪಕ್ಷಗಳ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಈ ವೇಳೆ ಅವರು ಕಳೆದ 12 ವರ್ಷಗಳಲ್ಲಿ ಸರಕಾರ ಮಾಡಿದ ಕೆಲಸಗಳನ್ನು ಉಲ್ಲೇಖಿಸಿದರು.
ಪ್ರಧಾನಿ ಮಾತು ಮುಂದುವರೆಸುತ್ತಾ, “ನನಗೆ ದೇಶಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಈ ಯಶಸ್ಸು ನನ್ನ ವೈಯಕ್ತಿಕವಲ್ಲ, ಬದಲಿಗೆ ದೇಶವಾಸಿಗಳ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ್ದಾಗಿದೆ. ‘ವಿಕಸಿತ ಭಾರತ’ ನಿರ್ಮಿಸುವಲ್ಲಿ ಎಲ್ಲರ ಪ್ರಯತ್ನವೇ ಪ್ರೇರಣಾ ಶಕ್ತಿಯಾಗಿದೆ. ರಾಜಕೀಯ ಸ್ಥಿರತೆ ಮತ್ತು ನಿರ್ಣಾಯಕ ನಾಯಕತ್ವದಿಂದಾಗಿ ದೇಶವು ಅಭಿವೃದ್ಧಿಯ ವೇಗವನ್ನು ಪಡೆದುಕೊಂಡಿದೆ” ಎಂದರು.
ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು! – ಸರ್ವೋಚ್ಚ ನ್ಯಾಯಾಲಯ
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
‘ಶ್ರೀರಾಮನು ದಶರಥನ ಪುತ್ರನಾಗಿರಲಿಲ್ಲ !’ (ಅಂತೆ) : Prof. Bhagwan
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಾಯಕ ನಿಜಾಮ್ ಅಲಿಯಾಸ್ ಇಬ್ರಾಹಿಂ ಬಂಧನ!
ಹಿಂದೂತ್ವನಿಷ್ಠ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜಾಕೀರ್ಗೆ ಮಧ್ಯಂತರ ಜಾಮೀನು!
ಬಲಿಷ್ಠ ಚೀನಾದಿಂದ ‘ಅಪರೂಪದ ಖನಿಜಗಳ’ ಸಂಸ್ಕರಣೆಯ ಮೇಲಿನ ಕಠಿಣ ನಿರ್ಬಂಧ ಮುಂದುವರಿಕೆ!