ಹಿಂದೂತ್ವನಿಷ್ಠ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜಾಕೀರ್‌ಗೆ ಮಧ್ಯಂತರ ಜಾಮೀನು!

ಹತ್ಯೆಯ ಮುಖ್ಯ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದ ಜಾಕೀರ್

ಮಂಗಳೂರು – ಭಾರತೀಯ ಜನತಾ ಯುವ ಮೋರ್ಚಾ ಸಂಘಟನೆಯ ಹಿಂದೂತ್ವನಿಷ್ಠ ನಾಯಕ ಪ್ರವೀಣ್ ನೆಟ್ಟಾರು ಅವರನ್ನು ೨೬ ಜುಲೈ ೨೦೨೨ ರಂದು ಹತ್ಯೆ ಮಾಡಲಾಗಿತ್ತು. ಅವರ ಹತ್ಯೆಗೈದ ಪ್ರಮುಖ ಆರೋಪಿಗಳಲ್ಲಿ ಒಬ್ಬನಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. ಜಾಕೀರ್ ಸವಣೂರು (೩೫ ವರ್ಷ) ಈ ಪ್ರಕರಣದ ೧೮ನೇ ಆರೋಪಿಯಾಗಿದ್ದಾನೆ. ಪ್ರವೀಣ್ ಅವರ ಹತ್ಯೆಯ ಸಂಚಿನಲ್ಲಿ ಈತ ನೇರವಾಗಿ ಭಾಗಿಯಾಗಿದ್ದವರಲ್ಲಿ ಒಬ್ಬನಾಗಿದ್ದನು.

ಜಾಕೀರ್‌ನನ್ನು ೨೮ ಜುಲೈ ೨೦೨೨ ರಂದು ಬೆಳ್ಳಾರೆಯ ಶಫೀಕ್ ಜೊತೆಗೆ ಪೊಲೀಸರು ಬಂಧಿಸಿದ್ದರು. ಇದಕ್ಕೂ ಮುನ್ನ ಈ ಪ್ರಕರಣದ ೨೬ನೇ ಆರೋಪಿಯಾಗಿದ್ದ ಸೋಮವಾರಪೇಟೆಯ ಎಚ್.ವೈ. ರಿಯಾಜ್‌ಗೆ ಜಾಮೀನು ಸಿಕ್ಕಿತ್ತು. ಈ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು.

ಪ್ರಕರಣದ ಹಿನ್ನೆಲೆ ಏನು?

೨೬ ಜುಲೈ ೨೦೨೨ ರಂದು ಬೆಳ್ಳಾರೆಯಲ್ಲಿ ‘ಅಕ್ಷಯ ಚಿಕನ್ ಸೆಂಟರ್’ ಮುಂದೆ ಪ್ರವೀಣ್ ನೆಟ್ಟಾರು ಅವರನ್ನು ಕೆಲವು ಜಿಹಾದಿ ಮುಸ್ಲಿಮರು ಮಾರಕಾಸ್ತ್ರಗಳಿಂದ ಇರಿದು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ಒಪ್ಪಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು ೨೬ ಜನರನ್ನು ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

ಕಾನೂನಿನ ಲೋಪದೋಷಗಳ ದುರುಪಯೋಗ ಪಡಿಸಿಕೊಂಡು ಈ ಜಿಹಾದಿಗಳು ಜಾಮೀನಿನ ಮೇಲೆ ಹೊರಬರುತ್ತಾರೆ ಮತ್ತು ಮತ್ತೆ ಹಿಂದೂಗಳ ವಿರುದ್ಧ ಚಟುವಟಿಕೆಗಳನ್ನು ನಡೆಸುತ್ತಾರೆ! ಇದು ಇನ್ನು ಎಷ್ಟು ವರ್ಷಗಳ ಕಾಲ ನಡೆಯುತ್ತದೆ?