23 ಸಾವಿರ ಕೋಟಿ ರೂಪಾಯಿಗಳ ಈ ಪ್ರಸ್ತಾವನೆಗೆ ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ!

ನವದೆಹಲಿ – ಭಾರತೀಯ ಸೇನೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರಕಾರವು 300 ಕ್ಕೂ ಹೆಚ್ಚು ‘ವಜ್ರ’ ಸ್ವಯಂಚಾಲಿತ ಫಿರಂಗಿಗಳ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸರಿಸುಮಾರು 23 ಸಾವಿರ ಕೋಟಿ ರೂಪಾಯಿಗಳ ಈ ಪ್ರಸ್ತಾವನೆಗೆ ಶೀಘ್ರದಲ್ಲೇ ರಕ್ಷಣಾ ಖರೀದಿ ಮಂಡಳಿಯ ಅನುಮೋದನೆ ಸಿಗುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಫಿರಂಗಿ ದಳಕ್ಕಾಗಿ ನಡೆಯುತ್ತಿರುವ ಅತಿ ದೊಡ್ಡ ಖರೀದಿ ಇದಾಗಿದೆ ಎಂದು ಪರಿಗಣಿಸಲಾಗಿದೆ.
155 ಕಿಲೋಮೀಟರ್ ಸಾಮರ್ಥ್ಯದ ಈ ಫಿರಂಗಿಗಳು ದೂರದ ವ್ಯಾಪ್ತಿಯವರೆಗೆ ನಿಖರ ದಾಳಿ ನಡೆಸಲು ಶಕ್ತವಾಗಿವೆ. ವಿವಿಧ ಭೂಪ್ರದೇಶಗಳಲ್ಲಿ ಹಾಗೂ ಕಠಿಣ ಹವಾಮಾನದಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡುವ ಇವುಗಳ ಸಾಮರ್ಥ್ಯ ಸಾಬೀತಾಗಿದೆ. ಇದರಿಂದಾಗಿ ಪಶ್ಚಿಮ ಗಡಿಯೊಂದಿಗೆ ಉತ್ತರದ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯ ಸಾಮರ್ಥ್ಯ ಹೆಚ್ಚಾಗಲಿದೆ. ದೂರದ ವ್ಯಾಪ್ತಿಯ ನಿಖರ ದಾಳಿ, ವೇಗದ ಚಲನೆ ಮತ್ತು ಯುದ್ಧಭೂಮಿಯಲ್ಲಿ ತಕ್ಷಣದ ಪ್ರತಿಕ್ರಿಯೆ, ಇದರಿಂದಾಗಿ ಹೊಸ ಫಿರಂಗಿಗಳು ಸೇನೆಯ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ರಕ್ಷಣಾ ಕ್ಷೇತ್ರದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2017 ರ ವರ್ಷದಲ್ಲಿ ಸರಿಸುಮಾರು 4 ಸಾವಿರದ 500 ಕೋಟಿ ರೂಪಾಯಿ ವೆಚ್ಚದಲ್ಲಿ 100 ಫಿರಂಗಿಗಳ ಮೊದಲ ತಂಡಕ್ಕೆ ಆದೇಶ ನೀಡಲಾಗಿತ್ತು ಮತ್ತು 2021 ರ ವರ್ಷದಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಅವುಗಳ ಪೂರೈಕೆ ಪೂರ್ಣಗೊಂಡಿತ್ತು. ಈ ಫಿರಂಗಿಗಳು ಪರಿಣಾಮಕಾರಿ ಪ್ರದರ್ಶನ ನೀಡಿವೆ ಎಂದು ರಕ್ಷಣಾ ಕ್ಷೇತ್ರದ ತಜ್ಞರು ಹೇಳಿದ್ದಾರೆ.
ಉತ್ಪಾದನೆ ದೇಶದಲ್ಲೇ ಆಗಲಿದೆ!
ಈ ಫಿರಂಗಿಗಳ ಉತ್ಪಾದನೆಯನ್ನು ದೇಶದಲ್ಲೇ ಮಾಡಲಾಗುತ್ತಿದ್ದು, ಅವುಗಳಲ್ಲಿನ ಸ್ವದೇಶಿ ಘಟಕಗಳ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿದೆ. ಹೊಸ ಖರೀದಿಯಿಂದ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೂ ಉತ್ತೇಜನ ಸಿಗಲಿದೆ.
ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು! – ಸರ್ವೋಚ್ಚ ನ್ಯಾಯಾಲಯ
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ನಿಯತ್, ನೀತಿ ಮತ್ತು ನಿರ್ಣಯಗಳಿಂದ ದೇಶದ ಅಭಿವೃದ್ಧಿಗೆ ವೇಗ! – ಪ್ರಧಾನಮಂತ್ರಿ : PM Narendra Modi
‘ಶ್ರೀರಾಮನು ದಶರಥನ ಪುತ್ರನಾಗಿರಲಿಲ್ಲ !’ (ಅಂತೆ) : Prof. Bhagwan
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಾಯಕ ನಿಜಾಮ್ ಅಲಿಯಾಸ್ ಇಬ್ರಾಹಿಂ ಬಂಧನ!
ಹಿಂದೂತ್ವನಿಷ್ಠ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜಾಕೀರ್ಗೆ ಮಧ್ಯಂತರ ಜಾಮೀನು!