ಬಿಹಾರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ; ಸಂತ್ರಸ್ತೆಯರನ್ನು ನೇಪಾಳ ಗಡಿಯಿಂದ ರಕ್ಷಿಸಿದರು
(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ಮುಖಂಡ)

ಮೋತಿಹಾರಿ (ಬಿಹಾರ) – ಬಿಹಾರದ ಪೂರ್ವ ಚಂಪಾರಣ ಜಿಲ್ಲೆಯ ಮೋತಿಹಾರಿ ನಗರದ ಮೌಲ್ವಿ ಅಶ್ಫಾಕ್, ಮದರಸಾದ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಅವರ ಮೇಲೆ ಬಲಾತ್ಕಾರ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಹುಡುಗಿಯರನ್ನು ನೇಪಾಳಕ್ಕೆ ಮಾನವ ಕಳ್ಳಸಾಗಣೆ ಮಾಡಲು ಸಹ ಯತ್ನಿಸಿದ್ದಾನೆ. ನೇಪಾಳ ಗಡಿಯ ಸಮೀಪ ನಾಲ್ವರು ಸಂತ್ರಸ್ತೆಯರೊಂದಿಗೆ ಅಶ್ಫಾಕ್ ನನ್ನು ಬಂಧಿಸಲಾಗಿದೆ. ಹುಡುಗಿಯರನ್ನು ಮಾರಾಟ ಮಾಡಿದರೆ ಆತನಿಗೆ 5 ಲಕ್ಷ ರೂಪಾಯಿಗಿಂತಲೂ ಅಧಿಕ ಹಣ ಸಿಗುತ್ತಿತ್ತು.
1. ಬಿಹಾರ ಪೊಲೀಸರ ತತ್ಪರತೆಯ ಕಾರ್ಯಾಚರಣೆಯಿಂದಾಗಿ 36 ಗಂಟೆಗಳ ಒಳಗಾಗಿ ಈ ಹುಡುಗಿಯರನ್ನು ರಕ್ಷಿಸಲಾಗಿದೆ.
2. ತಮಗೆ ಶಿಕ್ಷಣ ನೀಡುವ ಮೌಲ್ವಿಯೇ ತಮ್ಮನ್ನು ಮಾರಾಟ ಮಾಡುತ್ತಾನೆಂಬ ಕಲ್ಪನೆಯೂ ತಮಗಿರಲಿಲ್ಲ ಎಂದು ಸಂತ್ರಸ್ತೆಯರು ಹೇಳಿದ್ದಾರೆ.
3. ಪೊಲೀಸ್ ವಿಚಾರಣೆಯ ವೇಳೆ ಮೌಲ್ವಿಯು ತನ್ನ ಸಂಪೂರ್ಣ ಯೋಜನೆ ಮತ್ತು ನೇಪಾಳದಲ್ಲಿನ ಮಾನವ ಕಳ್ಳಸಾಗಣೆಯ ಜಾಲದ ಬಗ್ಗೆ ಮಾಹಿತಿ ನೀಡಿದ್ದಾನೆ.
4. 2022 ರಲ್ಲಿ ತಾನು ಮೌಲ್ವಿ ಆಗಲು ತರಬೇತಿ ಪಡೆದಿದ್ದೆ ಎಂದು ಆತ ಹೇಳಿದ್ದಾನೆ. ಈ ಅವಧಿಯಲ್ಲಿ ಆತ ನೇಪಾಳಕ್ಕೆ ಭೇಟಿ ನೀಡಿದ್ದನು. ಅಲ್ಲಿ ಆತನಿಗೆ ಒಬ್ಬ ಹೋಟೆಲ್ ಮಾಲೀಕನ ಪರಿಚಯವಾಗಿತ್ತು. ಆ ಹೋಟೆಲ್ ಮಾಲೀಕನು ಅಶ್ಫಾಕ್ ಜೊತೆ ಸೇರಿ ಈ ಯೋಜನೆ ರೂಪಿಸಿದ್ದನು. ಭಾರತದ ಮದರಸಾಗಳಿಂದ ಅಪ್ರಾಪ್ತ ಹುಡುಗಿಯರನ್ನು ನೇಪಾಳದ ಹೋಟೆಲ್ ಮಾಲೀಕನಿಗೆ ಮಾರಾಟ ಮಾಡುವುದು ಆತನ ಯೋಜನೆಯಾಗಿತ್ತು.
5. ಅಶ್ಫಾಕ್ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿ, ಶಿಕಾರಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಹಳ್ಳಿಯ ಮದರಸಾದಲ್ಲಿ ಮೌಲ್ವಿ ಆದ ನಂತರ ತನ್ನ ಯೋಜನೆ ಜಾರಿಗೆ ತಂದನು.
6. ಆತ ಅನೇಕ ವಿದ್ಯಾರ್ಥಿನಿಯರನ್ನು ತನ್ನ ಜಾಲದಲ್ಲಿ ಸಿಲುಕಿಸಲು ಪ್ರಯತ್ನಿಸಿ, ಅದರಲ್ಲಿ ಯಶಸ್ವಿಯೂ ಆಗಿದ್ದನು. ಆತ ಅಪ್ರಾಪ್ತ ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಅವರ ಮನಪರಿವರ್ತನೆ ಮಾಡುವಲ್ಲಿ ಕೂಡ ಯಶಸ್ವಿಯಾಗಿದ್ದನು.
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ