
ಚೆನ್ನೈ (ತಮಿಳುನಾಡು) – ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿಭಾಗೀಯ ಪೀಠವು ನೀಡಿರುವ ಮಧ್ಯಂತರ ಆದೇಶದ ಪ್ರಕಾರ, ೫,೦೦೦ ವರ್ಷಗಳಷ್ಟು ಹಳೆಯದಾದ ಪರಂಪರೆಯುಳ್ಳ ಬಿಂದು ಮಾಧವ ಪೆರುಮಾಳ್ ದೇವಾಲಯದ ಪಕ್ಕದಲ್ಲಿರುವ ಶೈಕ್ಷಣಿಕ ಆವರಣದಲ್ಲಿ ಚರ್ಚ್‌ನ ಅನಧಿಕೃತ ನಿರ್ಮಾಣವನ್ನು ತಡೆಯಲಾಗಿದೆ. ಥುತಿಪಟ್ಟು ಗ್ರಾಮದ (ಅಂಬೂರ ತಾಲೂಕು) ‘ಸರಕಾರ ಪೋರಂಬೋಕ್’ ಜಾಗದ ೬,೫೪೫ ಚದರ ಅಡಿ ವಿಸ್ತೀರ್ಣದ ವಿವಾದಿತ ಭೂಭಾಗದಲ್ಲಿ ಜೂನ್ ೨೨, ೨೦೨೬ ರವರೆಗೆ ‘ಯಥಾಸ್ಥಿತಿ’ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಈ ಸ್ಥಳದಲ್ಲಿ ಪ್ರಸ್ತುತ ೭೦ ವರ್ಷಗಳಷ್ಟು ಹಳೆಯದಾದ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಯಿದೆ. ಮೂಲತಃ ಈ ಜಾಗವು ಶ್ರೀನಿವಾಸ ನಾಯ್ಡು ಅವರಿಗೆ ಸೇರಿದ್ದಾಗಿದ್ದು, ನಂತರ ಅದನ್ನು ‘ಸರಕಾರ ಪೋರಂಬೋಕ್’ (ಸರಕಾರಿ ಪಾಳು ಬಿದ್ದ ಭೂಮಿ) ಎಂದು ವರ್ಗೀಕರಿಸಲಾಗಿತ್ತು. ಶ್ರೀನಿವಾಸ ನಾಯ್ಡು ಅವರು ಗ್ರಾಮದ ಮಕ್ಕಳಿಗಾಗಿ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸುವ ಸ್ಪಷ್ಟ ಉದ್ದೇಶದಿಂದ ಈ ಜಾಗವನ್ನು ಜಾನ್ ಸುಂದರ್ ಅವರಿಗೆ ಹಸ್ತಾಂತರಿಸಿದ್ದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ