Bangladeshi Illegal Migrants : ಬಂಗಾಳದಲ್ಲಿ ಭಾಜಪ ಸರಕಾರದ ಭಯದಿಂದ ಬಾಂಗ್ಲಾದೇಶೀಯರು ಪುನಃ ತಮ್ಮ ದೇಶಕ್ಕೆ ಓಡಲು ಪ್ರಾರಂಭಿಸಿದ್ದಾರೆ

ಉತ್ತರ 24 ಪರಗಣಾ ಜಿಲ್ಲೆಯ ಗಡಿಯಲ್ಲಿ 100 ಕ್ಕೂ ಹೆಚ್ಚು ನುಸುಳುಕೋರ ಕುಟುಂಬಗಳ ಜಂಗುಳಿ

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪ ಸರಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ಬಾಂಗ್ಲಾದೇಶಿ ನುಸುಳುಕೋರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಈ ಜನರು ಪುನಃ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ. ಉತ್ತರ 24 ಪರಗಣಾ ಜಿಲ್ಲೆಯ ಗಡಿಯಲ್ಲಿರುವ ಹಕೀಮಪುರ ತಪಾಸಣಾ ಕೇಂದ್ರದಲ್ಲಿ 100 ಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರು ಕುಟುಂಬ ಸಮೇತರಾಗಿ ಬಾಂಗ್ಲಾದೇಶಕ್ಕೆ ಮರಳಲು ಜಮಾಯಿಸಿದ್ದಾರೆ.
ಯಾವುದೇ ಬಾಂಗ್ಲಾದೇಶಿ ನುಸುಳುಕೋರರು ಎಲ್ಲಿಯಾದರೂ ಕಂಡುಬಂದರೆ, ಅವರನ್ನು ನೇರವಾಗಿ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಬೇಕೆಂದು ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆಗೆ ಆದೇಶಿಸಿದ್ದಾರೆ. ಈಗ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯದೇ ನೇರವಾಗಿ ಬಾಂಗ್ಲಾದೇಶಕ್ಕೆ ಮರಳಿ ಕಳುಹಿಸಲಾಗುವುದು. ಇದೇ ಕಾರಣದಿಂದಾಗಿ ಬಾಂಗ್ಲಾದೇಶೀಯರು ಹೆದರಿದ್ದಾರೆ.

ಭಾಜಪ ಶಾಸಕರಾದ ಬಿಶಾಲ ಲಾಮಾರವರು ಈ ನುಸುಳುಕೋರರ ಕುರಿತು ಮಾತನಾಡುತ್ತ, ಹಿಂದಿನ ಸರಕಾರವು ಕಾನೂನುಬಾಹಿರವಾಗಿ ಬಾಂಗ್ಲಾದೇಶೀಯರು ಮತ್ತು ರೋಹಿಂಗ್ಯಾಗಳಿಗೆ ಆಶ್ರಯ ನೀಡಿತ್ತು; ಏಕೆಂದರೆ ಅದು ಅವರ ಮತಪೆಟ್ಟಿಗೆಯಾಗಿತ್ತು. ಸೂಕ್ತ ದಾಖಲೆಗಳಿಲ್ಲದೆ ಯಾವುದೇ ದೇಶ ಪ್ರವೇಶಿಸುವುದರ ಪರಿಣಾಮವೇನು ? ಎಂಬುದು ಅವರಿಗೆ ಈಗ ಅರ್ಥವಾಗಿದೆ. ಮತದಾರರ ಪಟ್ಟಿಯ ಆಳವಾದ ಮರುಪರಿಶೀಲನೆಯ ಮೂಲಕ ಹೆಸರುಗಳನ್ನು ತೆಗೆದುಹಾಕಲಾದ ಅನೇಕರು ಈಗ ಪಲಾಯನ ಮಾಡುತ್ತಿದ್ದಾರೆ ಅಥವಾ ಅವರನ್ನು ಗಡೀಪಾರು ಮಾಡಲಾಗುತ್ತಿದೆ. ತನಿಖೆಯಿಂದಾಗಿ ಹಿಂದಿನ ಸರಕಾರದ ಆಶ್ರಯದಲ್ಲಿದ್ದ ಅನೇಕ ಜನರ ಹೆಸರುಗಳು ಮುನ್ನೆಲೆಗೆ ಬರಲಿವೆ. ಹಿಂದೆ ತೃಣಮೂಲ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ಎಸಗುತ್ತಿತ್ತು, ಮತಗಳನ್ನು ಲೂಟಿ ಮಾಡುತ್ತಿತ್ತು, ಜನರಿಗೆ ತಮ್ಮ ಇಚ್ಛೆಯಂತೆ ಮತ ಚಲಾಯಿಸುವ ಅವಕಾಶ ಸಿಗುತ್ತಿದ್ದುದು ಅಪರೂಪವಾಗಿತ್ತು ಎಂದರು.

ಗಡಿಯಲ್ಲಿ ಜಮಾಯಿಸಿರುವ ಬಾಂಗ್ಲಾದೇಶಿ ನುಸುಳುಕೋರರ ಕುರಿತು ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರ ಹೇಳಿಕೆ

ಬೇಗ ಓಡಿ ಹೋಗಿ, ನಮಗೆ ನಿಮಗೆ ಕಾರಾಗೃಹದಲ್ಲಿ ಊಟ ಹಾಕಲು ಇಷ್ಟವಿಲ್ಲ ! ನಮಗೆ ಈ ನುಸುಳುಕೋರ ಬಾಂಗ್ಲಾದೇಶೀಯರಿಗೆ ಕಾರಾಗೃಹದಲ್ಲಿ ಊಟ ಹಾಕಲು ಇಷ್ಟವಿಲ್ಲ, ನಾವು ಅವರ ಮೇಲೆ ಹಣವನ್ನು ಏಕೆ ವ್ಯಯ ಮಾಡಬೇಕು ? ಅವರು ಬೇಗನೆ ಓಡಿ ಹೋಗಲಿ ಎಂದು ನಾನು ಅವರಿಗೆ ಹೇಳುತ್ತೇನೆ, ಎಂಬ ಪ್ರತಿಕ್ರಿಯೆಯನ್ನು ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ಗಡಿಯಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತಿರುವ ನುಸುಳುಕೋರರ ಕುರಿತು ನೀಡಿದ್ದಾರೆ.

 

ಶುಭೇಂದು ಅಧಿಕಾರಿ ಅವರ ಆಡಳಿತಕ್ಕೆ ಅಕ್ಷರಶಃ ಅನ್ವಯವಾಗುವ ಸಂಸ್ಕೃತದ ಈ ಪ್ರಸಿದ್ಧ ಸುಭಾಷಿತ !

ದುರ್ಜನ ಪ್ರಥಮಮ್ ವಂದೇ ಸಜ್ಜನಮ್ ತದನಂತರಮ್|
ಮುಖಪ್ರಕ್ಞಾಲನತ್ಪೂರ್ವ ಗುದಪ್ರಕ್ಞಾಲನಂ ಯಥಾ||

ಎಂಬುದು ಸಂಸ್ಕೃತದ ಪ್ರಸಿದ್ಧ ಸುಭಾಷಿತವಾಗಿದೆ. ವ್ಯಂಗ್ಯವಾಗಿ ಬರೆಯಲಾದ ಈ ಸುಭಾಷಿತದ ಅರ್ಥವೆಂದರೆ – ಹೇಗೆ ಬೆಳಿಗ್ಗೆ ಮುಖಪ್ರಕ್ಷಾಲನೆಕ್ಕಿಂತ (ಮುಖ ತೊಳೆಯುವುದಕ್ಕಿಂತ) ಮುಂಚೆ ಗುದದ್ವಾರವನ್ನು ಸ್ವಚ್ಛಗೊಳಿಸುತ್ತಾರೋ, ಹಾಗೆಯೇ ನಾನು ಮೊದಲು ದುರ್ಜನನಿಗೆ ಮತ್ತು ನಂತರ ಸಜ್ಜನನಿಗೆ ವಂದಿಸುತ್ತೇನೆ. ಬಂಗಾಳದಲ್ಲಿ ಸದ್ಯ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಕೈಗೆತ್ತಿಕೊಂಡಿರುವ ಅಭಿಯಾನವು ಅದರದ್ದೇ ಒಂದು ಭಾಗವಾಗಿದೆ.