
ನವದೆಹಲಿ – ದೆಹಲಿ ಜಿಮ್ಖಾನಾ ಕ್ಲಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ದೆಹಲಿ ಹೈಕೋರ್ಟ್‌ಗೆ, ಕ್ಲಬ್‌ನ ಭೂಮಿಯ ಮೇಲೆ ತಾವು ಬಲವಂತವಾಗಿ ನಿಯಂತ್ರಣ ಸಾಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜೂನ್ ೫ ರೊಳಗೆ ಜಾಗವನ್ನು ಖಾಲಿ ಮಾಡಲು ನೀಡಿರುವ ಗಡುವು ಕೇವಲ ಕ್ಲಬ್ ಸ್ವಯಂಪ್ರೇರಿತವಾಗಿ ಜಾಗವನ್ನು ಖಾಲಿ ಮಾಡಲು ಮಾತ್ರ ನೀಡಲಾಗಿದೆ. ಒಂದು ವೇಳೆ ಕ್ಲಬ್ ಭೂಮಿಯನ್ನು ಖಾಲಿ ಮಾಡದಿದ್ದರೆ, ಸರಕಾರವು ಕಾನೂನಿನ ಪ್ರಕಾರ ನಿಗದಿತ ಪ್ರಕ್ರಿಯೆಯನ್ನೇ ಪಾಲಿಸಲಿದೆ. ಅಲ್ಲದೆ, ಭೂಮಿಯನ್ನು ಮರಳಿ ಪಡೆದ ನಂತರವೂ ಸದಸ್ಯರ ಸದಸ್ಯತ್ವವು ಹಾಗೇ ಮುಂದುವರಿಯಲಿದೆ. ಜಿಮ್ಖಾನಾ ಕ್ಲಬ್‌ಗೆ ಮತ್ತೊಂದು ಸ್ಥಳದಲ್ಲಿ ಪರ್ಯಾಯ ಭೂಮಿಯನ್ನು ನೀಡಲಾಗುವುದು ಎಂದೂ ಸರಕಾರವು ಭರವಸೆ ನೀಡಿದೆ.
ಸರಕಾರಕ್ಕೆ ಈ ಭೂಮಿ ಏಕೆ ಬೇಕು ?
ಲ್ಯೂಟಿಯನ್ಸ್ ಪ್ರದೇಶದಲ್ಲಿರುವ ಈ ಆಸ್ತಿಯು ೨೭.೩ ಎಕರೆಯಷ್ಟು ವಿಸ್ತಾರವಾಗಿದೆ. ಈ ಭೂಮಿಯು ಪ್ರಧಾನ ಮಂತ್ರಿಗಳ ನಿವಾಸ ಮತ್ತು ಉನ್ನತ ಸುರಕ್ಷತಾ ವಲಯದ ಹತ್ತಿರದಲ್ಲಿದೆ ಎಂದು ಸರಕಾರವು ಹೇಳಿದೆ. ಈ ಜಾಗವನ್ನು ರಕ್ಷಣಾ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಬಳಸಲಾಗುವುದು. ಬಾಡಿಗೆ ಒಪ್ಪಂದದ ‘ಕಲಂ ೪’ ರ ಅಡಿಯಲ್ಲಿ ‘ಸಾರ್ವಜನಿಕ ಉದ್ದೇಶಗಳಿಗಾಗಿ’ ಭೂಮಿಯನ್ನು ಮರಳಿ ಪಡೆಯುವ ಹಕ್ಕು ಸರಕಾರಕ್ಕೆ ಇದೆ ಎನ್ನಲಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ