ಒಂದು ವರ್ಷದಲ್ಲಿ ೧೦೩ ಬಾಂಗ್ಲಾದೇಶಿ ನಾಗರಿಕರು ವಶಕ್ಕೆ

ಪುಣೆ – ಬುಧವಾರ ಪೇಠ್‌ನ ‘ಸಾಗರ್ ಬಿಲ್ಡಿಂಗ್’ನಲ್ಲಿ ಬಾಂಗ್ಲಾದೇಶಿ ಮಹಿಳೆಯರು ವಿನಾ ಅನುಮತಿ ವಾಸಿಸುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ವಲಯ ೧ ರ ಪೊಲೀಸ್ ಉಪಾಯುಕ್ತ ಋಷಿಕೇಶ ರಾವಲೆ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಟ್ಟಡದ ಮೇಲೆ ದಾಳಿ ಮಾಡಿದರು. ಈ ಕಾರ್ಯಾಚರಣೆಯಲ್ಲಿ ೬ ಬಾಂಗ್ಲಾದೇಶಿ ಮಹಿಳೆಯರನ್ನು ವಶಕ್ಕೆ ಪಡೆದರು. ಈ ಬಾಂಗ್ಲಾದೇಶಿ ಮಹಿಳೆಯರು ಅಕ್ರಮವಾಗಿ ಬಂದಿದ್ದಾರೆಂಬುದು ವಿಚಾರಣೆ ವೇಳೆ ಬೆಳಕಿಗೆ ಬಂತು. ಅಕ್ರಮವಾಗಿ ವಾಸಿಸುತ್ತಿದ್ದ ಪ್ರಕರಣದಲ್ಲಿ ಈ ಮಹಿಳೆಯರ ವಿರುದ್ಧ ಫರಾಸ್‌ಖಾನಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಯಿತು.
೧. ಈ ದಲ್ಲಾಳಿಗಳು ಭಾರತದಲ್ಲಿ ‘ಬ್ಯೂಟಿ ಪಾರ್ಲರ್’, ‘ಹೊಲಿಗೆ ಕೆಲಸ’, ‘ಮನೆಕೆಲಸ’ ಕೊಡಿಸುವುದಾಗಿ, ಆಮಿಷವೊಡ್ಡಿ ಭಾರತಕ್ಕೆ ಕರೆತಂದಿರುವುದು ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ.
೨. ಈ ಮಹಿಳೆಯರನ್ನು ಬುಧವಾರ ಪೇಠ್‌ನ ವೇಶ್ಯಾಗೃಹಕ್ಕೆ ಕರೆತರಲಾಯಿತು. ಬೆದರಿಸಿ ವೇಶ್ಯಾವಾಟಿಕೆ ಮಾಡಲು ಬಲವಂತ ಮಾಡಲಾಯಿತು.
೩. ಬಾಂಗ್ಲಾದೇಶಿ ಮಹಿಳೆಯರು ಭಾರತೀಯ ಗಡಿಯನ್ನು ಹೇಗೆ ದಾಟಿದರು? ವಾಸಿಸುವ ಕಾಗದಪತ್ರಗಳು ಹೇಗೆ ಸಿಕ್ಕವು? ಇದರ ತನಿಖೆ ನಡೆಯುತ್ತಿದೆ.
ವರ್ಷದಲ್ಲಿ ಕೇವಲ ೧೦೩ ಬಾಂಗ್ಲಾದೇಶಿ ನಾಗರಿಕರು ವಶಕ್ಕೆ !ವರ್ಷದಲ್ಲಿ ನಗರದ ಮಧ್ಯಭಾಗದಲ್ಲಿ ಯಾವುದೇ ಕಾಗದಪತ್ರಗಳಿಲ್ಲದೆ ವಾಸಿಸುತ್ತಿದ್ದ ಕೇವಲ ೧೦೩ ಬಾಂಗ್ಲಾದೇಶಿ ನಾಗರಿಕರನ್ನು ವಶಕ್ಕೆ ಪಡೆದರು. ಅವರ ಪೈಕಿ ಅನೇಕರನ್ನು ತಾಯ್ನಾಡಿಗೆ ಕಳುಹಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಉಪಾಯುಕ್ತ ರಾವಲೆ ಅವರು ನೀಡಿದರು. (ದೇಶದಲ್ಲಿ ಕೋಟ್ಯಂತರ ಬಾಂಗ್ಲಾದೇಶಿಯರು ವಾಸಿಸುತ್ತಿರುವಾಗ ಒಂದು ವರ್ಷದಲ್ಲಿ ಪುಣೆ ನಗರದಿಂದ ಕೇವಲ ಇಷ್ಟೇ ಬಾಂಗ್ಲಾದೇಶಿಯರು ಪತ್ತೆಯಾದರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ! – ಸಂಪಾದಕರು) |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!