
ಗೌಹತ್ತಿ (ಅಸ್ಸಾಂ) – ಎ.ಐ.ಯು.ಡಿ.ಎಫ್. (ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರೆಟಿಕ್ ಫ್ರಂಟ್) ಪಕ್ಷದ ಮಾಜಿ ಶಾಸಕ ಅಲಿ ಅಕಬರ ಮಿಯಾರವರು ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮತ್ತು ಪೊಲೀಸರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಲಾಗಿದೆ. ಬಕ್ರೀದ್ ಸಂದರ್ಭದಲ್ಲಿ ಮಿಯಾರವರು ಪೊಲೀಸರಿಗೆ ಬೆದರಿಕೆ ಹಾಕುತ್ತಾ, ‘ಒಂದುವೇಳೆ ಕಾನೂನು-ಸುವ್ಯವಸ್ಥೆಯು (ಬಲಿ ತಡೆಯಲು) ಮಧ್ಯೆ ಬಂದರೆ, ಪೊಲೀಸರನ್ನೂ ‘ಬಲಿ’ ನೀಡಲಾಗುವುದು’ ಎಂದು ಹೇಳಿದರು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಪೊಲೀಸರು ಕ್ರಮ ಕೈಗೊಂಡರು. ಪೊಲೀಸರ ಹೇಳಿಕೆಯನ್ವಯ ಇಂತಹ ಹೇಳಿಕೆಗಳು ಸಮಾಜದಲ್ಲಿ ಉದ್ವಿಗ್ನತೆಯನ್ನು ನಿರ್ಮಿಸಬಹುದು ಮತ್ತು ಅವು ಕಾನೂನಿಗೆ ವಿರೋಧವಾಗಿವೆ.
ಇನ್ನೊಂದೆಡೆ ಅನೇಕ ಸ್ಥಳೀಯ ಈದ್ಗಾ (ನಮಾಜ ಮಾಡುವ ಸ್ಥಳಗಳು) ಸಮಿತಿಗಳೂ ಯಾವುದೇ ವಿವಾದವಾಗಬಾರದು; ಎಂದು ಸ್ವಇಚ್ಛೆಯಿಂದ ಹಸು ಮತ್ತು ಎಮ್ಮೆಗಳ ಬಲಿ ನೀಡದಿರಲು ಘೋಷಣೆ ಮಾಡಿವೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !