
ಚಂಡೀಗಢ – ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸಂಸದ ಸಂಜೀವ್ ಅರೋರಾ ಅವರನ್ನು ಆರ್ಥಿಕ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದೆ. ಇದರ ನಂತರ ಆಪ್ ಕಾರ್ಯಕರ್ತರು ಭಾಜಪದ ಕಛೇರಿಯನ್ನು ಧ್ವಂಸಗೊಳಿಸಿದ್ದಾರೆ. ಆಪ್ ಕಾರ್ಯಕರ್ತರು ಭಾಜಪದ ರಾಜ್ಯಾಧ್ಯಕ್ಷ ಸುನಿಲ ಜಾಖಡ್ ಅವರ ಕಚೇರಿಯ ಹೊರಗೆ ಪ್ರತಿಭಟನೆಯನ್ನೂ ನಡೆಸಿದರು. ಅವರು ಅರೋರಾ ಅವರ ಬಂಧನವನ್ನು ವಿರೋಧಿಸುತ್ತಿದ್ದರು.
अरविंद केजरीवाल जी!
ध्यान से सुन लीजिए, "पंजाब को ममता का बंगाल नहीं बनने दिया जाएगा।"
प्रदर्शन के नाम पर बलाचौर (नवांशहर) में अकाली दल से आम आदमी पार्टी में शामिल हुए आपके विधायक सुखविंदर सुखी ने पुलिस की मौजूदगी में भाजपा के दफ्तर में घुसकर भाजपा के जिला अध्यक्ष के साथ मारपीट… pic.twitter.com/hAVCLJEcdE— Sunil Jakhar (@sunilkjakhar) May 10, 2026
ಸುನಿಲ ಜಾಖಡ್ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಟೀಕೆ ಮಾಡುತ್ತಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಅರವಿಂದ್ ಕೇಜ್ರಿವಾಲ್ ಜಿ! ಚೆನ್ನಾಗಿ ಕೇಳಿಸಿಕೊಳ್ಳಿ, ಪಂಜಾಬ್ ಅನ್ನು ಮಮತಾ ಅವರ ಬಂಗಾಳವಾಗಲು ಬಿಡುವುದಿಲ್ಲ. ಪಂಜಾಬಿ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ನೀವು ಎಷ್ಟೇ ನಾಟಕವಾಡಿದರೂ, ಪಂಜಾಬ್ ಅನ್ನು ಲೂಟಿ ಮಾಡುವ ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯಲಿದೆ ಮತ್ತು ಇದರ ಬಿಸಿ ತೆರೆಯ ಮರೆಯಲ್ಲಿ ಅಡಗಿರುವ ಜನರ ವರೆಗೂ ತಟ್ಟಲಿದೆ, ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ