
ಮುಂಬಯಿ – ಭಯೋತ್ಪಾದಕ ದಾವೂದ್ ಇಬ್ರಾಹಿಂನ ಆಪ್ತ ಇಕ್ಬಾಲ್ ಮಿರ್ಚಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕ್ರಮ ಕೈಗೊಂಡಿದೆ. ಮುಂಬಯಿ ಮತ್ತು ದುಬೈನಲ್ಲಿರುವ ಇಕ್ಬಾಲ್ ಮಿರ್ಚಿ ಮತ್ತು ಆತನ ಕುಟುಂಬದ ಸದಸ್ಯರಿಗೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಜಪ್ತಿ ಮಾಡಲು ಮುಂಬಯಿನ ವಿಶೇಷ (ಪಿಎಂಎಲ್ಎ) ನ್ಯಾಯಾಲಯವು ಏಪ್ರಿಲ್ 29 ರಂದು ಇಡಿಗೆ ಅನುಮತಿ ನೀಡಿದೆ. ಈ ಕ್ರಮವನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ (ಎಫ್ಇಒಎ) 2018 ರ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಭೂಗತ ಜಗತ್ತಿನ ಕಪ್ಪು ಹಣವನ್ನು ಬಿಳಿ ಮಾಡುವ ಜಾಲದ ವಿರುದ್ಧ ಇಡಿ ನಡೆಸುತ್ತಿರುವ ಇದುವರೆಗಿನ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ. ಕ್ರಿಮಿನಲ್ ಚಟುವಟಿಕೆಗಳಿಂದ ಬಂದ ಹಣದಿಂದ ಈ ಆಸ್ತಿಗಳನ್ನು ಖರೀದಿಸಲಾಗಿದೆ.
ವರ್ಲಿ ಪ್ರದೇಶದಲ್ಲಿರುವ ರಾಬಿಯಾ ಮ್ಯಾನ್ಷನ್, ಮರಿಯಮ್ ಲಾಡ್ಜ್ ಮತ್ತು ಸೀ ವ್ಯೂ ಎಂಬ 3 ಅತ್ಯಂತ ದುಬಾರಿ ಆಸ್ತಿಗಳು ಈ ಜಪ್ತಿಯಲ್ಲಿ ಸೇರಿವೆ. ಇವುಗಳ ಒಟ್ಟು ವಿಸ್ತೀರ್ಣ 4,970.41 ಚದರ ಮೀಟರ್ ಆಗಿದೆ. ಮಿರ್ಚಿ ಈ ಆಸ್ತಿಗಳನ್ನು 1986 ರಲ್ಲಿ ಕೇವಲ 6.5 ಲಕ್ಷ ರೂಪಾಯಿಗೆ ಖರೀದಿಸಿದ್ದನು, ಇವುಗಳ ಇಂದಿನ ಮೌಲ್ಯ ಕೋಟಿಗಟ್ಟಲೆ ರೂಪಾಯಿಗಳಾಗಿದೆ. ಈ ಆಸ್ತಿಗಳ ಮುಂದೆ ಸರಕಾರಿ ಜಪ್ತಿಯ ಫಲಕಗಳನ್ನು ಹಾಕಲಾಗುವುದು. ಇದರ ನಂತರ ಅವುಗಳನ್ನು ಹರಾಜು ಮಾಡುವ ಮೂಲಕ ಜಪ್ತಿ ಪ್ರಕ್ರಿಯೆ ನಡೆಯಲಿದೆ. ದುಬೈನ ಹೋಟೆಲ್ ಮಿಡ್‌ವೆಸ್ಟ್ ಅಪಾರ್ಟ್‌ಮೆಂಟ್ಸ್, ಕಾರ್ಪೊರೇಟ್ ಬೇ ಮತ್ತು ಡಿಇಸಿ ಟವರ್ಸ್ ನಲ್ಲಿರುವ 14 ರಿಯಲ್ ಎಸ್ಟೇಟ್ ಯುನಿಟ್ ಗಳನ್ನು ಇಡಿಯಿಂದ ಜಪ್ತಿ ಮಾಡಲಾಗುವುದು.
ಈ ಆಸ್ತಿಗಳು ಜಪ್ತಿಯಾಗಬಾರದು ಎಂಬ ಕಾರಣಕ್ಕೆ ಮಿರ್ಚಿ ವಿವಿಧ ಟ್ರಸ್ಟ್ ಮತ್ತು ನಕಲಿ ಬಾಡಿಗೆದಾರರ ಮೂಲಕ ದಾಖಲೆಗಳಲ್ಲಿ ತಿದ್ದುಪಡಿ ಮಾಡಿದ್ದನು. ಆಸ್ತಿಗಳನ್ನು ಪಡೆಯಲು 154 ಕೋಟಿ ರೂಪಾಯಿಗಳನ್ನು ವಿದೇಶಕ್ಕೆ ವರ್ಗಾಯಿಸಿದ ಆರೋಪವಿದೆ. ಈ ಪ್ರಕರಣದ ಎಳೆಗಳು ಡಿಎಚ್ಎಫ್ಎಲ್ ನ ವಧಾವನ್ ಸಹೋದರರಿಗೂ ಸಂಪರ್ಕ ಹೊಂದಿವೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !