‘ಜೈಶ್-ಎ-ಮೊಹಮ್ಮದ್’ನಿಂದ ನೇಮಕಾತಿ ಅಭಿಯಾನ!

ಚಂಡೀಗಢ (ಪಂಜಾಬ್) – ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳಾದ ‘ಜೈಶ್-ಎ-ಮೊಹಮ್ಮದ್’ ಮತ್ತು ‘ಲಷ್ಕರ್-ಎ-ತೊಯ್ಬಾ’ ಮಹಿಳಾ ಆತ್ಮಾಹುತಿ ದಳಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆಸುತ್ತಿವೆ. ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸಲು ಈ ಮಹಿಳಾ ಆತ್ಮಾಹುತಿ ದಳಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಮಹಿಳಾ ಆತ್ಮಾಹುತಿ ದಳಗಳ ಪ್ರಮುಖ ಸಭೆಯ ಕುರಿತು ಗುಪ್ತಚರ ಮಾಹಿತಿ ಮತ್ತು ಛಾಯಾಚಿತ್ರಗಳು ಲಭ್ಯವಾಗಿವೆ. ಈ ಆತ್ಮಾಹುತಿ ದಳಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ‘ಜೈಶ್-ಎ-ಮೊಹಮ್ಮದ್’ನ ಮಹಿಳಾ ಘಟಕವಾದ ‘ಜಮಾತ್-ಉಲ್-ಮೊಮಿನಾತ್’ಗೆ ವಹಿಸಲಾಗಿದೆ. ಈ ಭಯೋತ್ಪಾದಕರು ಅಮರನಾಥ ಯಾತ್ರೆಯ ಪ್ರಮುಖ ಸ್ಥಳಗಳ ಮೇಲೆ ಕಣ್ಗಾವಲು ನಡೆಸಿರುವುದು ಬೆಳಕಿಗೆ ಬಂದಿದೆ. ಈ ವಿಷಯದಲ್ಲಿ ಗಡಿ ಭದ್ರತಾ ಪಡೆಯು (BSF) ತೀವ್ರ ಜಾಗರೂಕವಾಗಿದ್ದು, ಇತ್ತೀಚೆಗಷ್ಟೇ ಶ್ರೀನಗರದಲ್ಲಿ ಒಬ್ಬ ಮಹಿಳೆ ಸೇರಿದಂತೆ 4 ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಗುಪ್ತಚರ ಸಂಸ್ಥೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಏಪ್ರಿಲ್ 18 ರಂದು ಪಾಕಿಸ್ತಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಆತ್ಮಾಹುತಿ ದಳಗಳ ನೇಮಕಾತಿ ಮತ್ತು ತರಬೇತಿ ಶಿಬಿರಗಳ ಬಗ್ಗೆ ವಿವರವಾದ ಮಾಹಿತಿಯನ್ನು ಈಗಾಗಲೇ ಕೇಂದ್ರ ಭದ್ರತಾ ಪಡೆಗಳಿಗೆ ಹಸ್ತಾಂತರಿಸಲಾಗಿದೆ. ಪಾಕಿಸ್ತಾನದ ಸೇನೆಯ ಸಂಪೂರ್ಣ ಗಮನವು ಈಗ ಮಹಿಳಾ ಆತ್ಮಾಹುತಿ ದಳಗಳನ್ನು ಸಿದ್ಧಪಡಿಸುವುದರ ಮೇಲೆ ಕೇಂದ್ರೀಕೃತವಾಗಿದೆ ಎಂದು ಈ ಮೂಲಗಳು ತಿಳಿಸಿವೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ