ಬಾಂಬ್ ಇಡುತ್ತಿದ್ದ ವ್ಯಕ್ತಿ ಸಾವು : ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ಪ್ರಾರಂಭ !

ಪಟಿಯಾಲಾ (ಪಂಜಾಬ) – ಇಲ್ಲಿನ ಶಂಭು ಮತ್ತು ರಾಜಪುರ ರೈಲ್ವೆ ನಿಲ್ದಾಣಗಳ ನಡುವಿನ ಮೀಸಲಾದ ‘ಸರಕು ಸಾಗಣೆ ರೈಲ್ವೆ ಹಳಿ’ಯ ಮೇಲೆ ಬಾಂಬ್ ಇಡುತ್ತಿದ್ದಾಗಲೇ ಅದು ಸ್ಫೋಟಗೊಂಡು, ಬಾಂಬ್ ಇಡುತ್ತಿದ್ದ ವ್ಯಕ್ತಿಯು ಮೃತಪಟ್ಟಿದ್ದಾನೆ. ಏಪ್ರಿಲ್ ೨೭ ರ ತಡರಾತ್ರಿ ಈ ಘಟನೆ ಸಂಭವಿಸಿದೆ. ಈ ಸ್ಫೋಟದಿಂದಾಗಿ ರೈಲ್ವೆ ಹಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಘಟನಾ ಸ್ಥಳದಿಂದ ಅಜ್ಞಾತ ವ್ಯಕ್ತಿಯೊಬ್ಬನ ಛಿದ್ರಗೊಂಡ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ವ್ಯಕ್ತಿಯು ರೈಲ್ವೆ ಹಳಿಯ ಮೇಲೆ ಬಾಂಬ್ ಇಡಲು ಪ್ರಯತ್ನಿಸುತ್ತಿರಬಹುದು ಮತ್ತು ಅದೇ ಸಮಯದಲ್ಲಿ ಬಾಂಬ್ ಸ್ಫೋಟಗೊಂಡಿದ್ದರಿಂದ ಅವನು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪಟಿಯಾಲಾದ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಉಪಮಹಾನಿರೀಕ್ಷಕರು ದೊಡ್ಡ ಪೊಲೀಸ್ ಪಡೆಯೊಂದಿಗೆ, ಹಾಗೆಯೇ ಬಾಂಬ್ ಪತ್ತೆ ದಳದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಘಟನಾ ಸ್ಥಳದಿಂದ ಎರಡು ಮೋಟಾರ್ ಸೈಕಲಗಳು, ವಾಯರ್, ಇತರ ಸ್ಫೋಟಕ ಸಾಮಗ್ರಿಗಳು ಮತ್ತು ಒಂದು ಒಡೆದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪ್ರಸ್ತುತ ಅಲ್ಲಿ ದುರಸ್ತಿ ಕಾರ್ಯಕ್ಕಾಗಿ ಒಂದು ಬದಿಯ ಹಳಿಯನ್ನು ಬಂದ್ ಮಾಡಲಾಗಿದ್ದರೂ, ಇನ್ನೊಂದು ಬದಿಯಿಂದ ರೈಲು ಸಂಚಾರ ಮುಂದುವರಿದಿದೆ. ಪೊಲೀಸರು ಸದ್ಯ ಎಲ್ಲಾ ಆಯಾಮಗಳಿಂದ ಈ ಘಟನೆಯ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ದೊಡ್ಡ ವಿಷಯವೊಂದು ಬಹಿರಂಗವಾಗಲಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ