ಮುಖ್ಯ ಆರೋಪಿ ಜಹೀರುಲ್ ಶೇಖ್ ಪರಾರಿ, ೬ ಜನರ ಬಂಧನ
೯ ಪೀಡಿತ ಹಿಂದೂಗಳ ರಕ್ಷಣೆ
ಅಮಾನುಷ ಹಲ್ಲೆ ಹಾಗೂ ಗೋಮಾಂಸ ತಿನ್ನಲು ಒತ್ತಡ

ಧುಬರಿ (ಆಸ್ಸಾಂ) – ಆಸ್ಸಾಂನ ಧುಬರಿ ಜಿಲ್ಲೆಯ ಗೌರಿಪುರದಲ್ಲಿರುವ ಒಂದು ಅಕ್ರಮ ವ್ಯಸನಮುಕ್ತಿ ಕೇಂದ್ರದಲ್ಲಿ (‘ರಿಹ್ಯಾಬ್ ಸೆಂಟರ್’ನಲ್ಲಿ) ಹಿಂದೂಗಳಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಕಿರುಕುಳ ನೀಡುತ್ತಿದ್ದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ ೨೪ ರ ತಡರಾತ್ರಿ ಪೊಲೀಸರು ಈ ಕೇಂದ್ರದ ಮೇಲೆ ದಾಳಿ ನಡೆಸಿ ೬ ಜನರನ್ನು ಬಂಧಿಸಿದ್ದಾರೆ ಮತ್ತು ೯ ಪೀಡಿತ ಹಿಂದೂಗಳನ್ನು ರಕ್ಷಿಸಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ಜಹೀರುಲ್ ಶೇಖ್ ಸದ್ಯ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯ ಪ್ರಕಾರ, ವ್ಯಸನಮುಕ್ತಿ ಕೇಂದ್ರದ ಕಿರುಕುಳಕ್ಕೆ ಬೇಸತ್ತು ೫ ಸಂತ್ರಸ್ತ ಹಿಂದೂಗಳು ಕಟ್ಟಡದಿಂದ ಜಿಗಿದು ಓಡಿಹೋಗಲು ಪ್ರಯತ್ನಿಸಿದ್ದರು. ಪೊಲೀಸರು ಅದೇ ರಾತ್ರಿ ಈ ಕೇಂದ್ರದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಅವರ ವಿಚಾರಣೆ ನಡೆಸಿದಾಗ ಕೇಂದ್ರದ ಒಳಗೆ ನಡೆಯುತ್ತಿದ್ದ ಭಯಾನಕ ಕೃತ್ಯಗಳು ಬಯಲಿಗೆ ಬಂದಿವೆ.
ಭಯಾನಕ ಕಿರುಕುಳ ಈ ರೀತಿಯಾಗಿ ನಡೆಯುತ್ತಿತ್ತು!
೧. ಕೇಂದ್ರಕ್ಕೆ ದಾಖಲಾದ ಹಿಂದೂಗಳಿಗೆ ‘ಉತ್ತಮ ಚಿಕಿತ್ಸೆ ನೀಡುವ’ ಆಮಿಷವೊಡ್ಡಿ ಇಸ್ಲಾಂ ಸ್ವೀಕರಿಸಲು ಒತ್ತಾಯಿಸಲಾಗುತ್ತಿತ್ತು.
೨. ಸಂತ್ರಸ್ತರಿಗೆ ಗೋಮಾಂಸ ತಿನ್ನಲು ಒತ್ತಡ ಹೇರಲಾಗುತ್ತಿತ್ತು. ನಿರಾಕರಿಸಿದರೆ ಕಬ್ಬಿಣದ ಸಲಾಕೆಗಳಿಂದ ಅಮಾನುಷವಾಗಿ ಹಲ್ಲೆ ಮಾಡಲಾಗುತ್ತಿತ್ತು.
೩. ಸಂತ್ರಸ್ತ ಹಿಂದೂಗಳು ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ.
೪. ಅವರಿಗೆ ಶೌಚಾಲಯ ಸ್ವಚ್ಛಗೊಳಿಸಲು ಒತ್ತಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಕೇಂದ್ರದ ಸಿಬ್ಬಂದಿ ಮತ್ತು ಮಾಲೀಕರ ಬಟ್ಟೆಗಳನ್ನು ಒಗೆಯಲು ಬಲವಂತ ಮಾಡಲಾಗುತ್ತಿತ್ತು.
೫. ಕೇಂದ್ರದ ವತಿಯಿಂದ ಪ್ರತಿ ತಿಂಗಳು ೧೨ ಸಾವಿರ ರೂಪಾಯಿಗಳನ್ನು ಪಡೆಯಲಾಗುತ್ತಿತ್ತು; ಆದರೆ ಅವರ ನಿರ್ವಹಣೆಗಾಗಿ ಕೇವಲ ೨ ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಖರ್ಚು ಮಾಡಲಾಗುತ್ತಿತ್ತು. ಈ ಪ್ರಕರಣದ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !